ನವದೆಹಲಿ: ಭಾರತದಲ್ಲಿ ಕಾನೂನು ಪ್ರಕ್ರಿಯೆಯ ಭಾಗವಾಗಿ ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್ನ ಎಕ್ಸ್ (ಟ್ವಿಟರ್) ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ.

ರಾಯಿಟರ್ಸ್ನ ಎಕ್ಸ್ ಖಾತೆಯನ್ನು ತಡೆಹಿಡಿದಿಲ್ಲ ಮತ್ತು ಯಾವುದೇ ಕಾನೂನು ಅವಶ್ಯಕತೆಯನ್ನು ಹೊಂದಿಲ್ಲ. ಸಮಸ್ಯೆಯನ್ನು ಪರಿಹರಿಸಲು ರಾಯಿಟರ್ಸ್ ಸಂಸ್ಥೆ ‘ಎಕ್ಸ್’ನೊಂದಿಗೆ ಸಂಪರ್ಕದಲ್ಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ರಾಯಿಟರ್ಸ್ನ ಎಕ್ಸ್ ಖಾತೆಯನ್ನು ಶೀಘ್ರದಲ್ಲೇ ಪುನಃಸ್ಥಾಪಿಸುವ ಸಾಧ್ಯತೆಯಿದೆ.

‘ನಮ್ಮ ಎಕ್ಸ್ ಖಾತೆಯನ್ನು ತಡೆಹಿಡಿಯಲು ಭಾರತ ಸರ್ಕಾರದಿಂದ ಯಾವುದೇ ಅಡೆತಡೆಗಳಿಲ್ಲ. ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ನಿಟ್ಟಿನಲ್ಲಿ ಎಕ್ಸ್ನೊಂದಿಗೆ ನಾವು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ’ ಎಂದು ರಾಯಿಟರ್ಸ್ ವಕ್ತಾರರು ಹೇಳಿದ್ದಾರೆ.

ಮೇ ತಿಂಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಸಂದರ್ಭದಲ್ಲಿ ರಾಯಿಟರ್ಸ್ ಎಕ್ಸ್ ಖಾತೆ ಸೇರಿದಂತೆ ಇತರೆ ಖಾತೆಗಳನ್ನು ನಿರ್ಬಂಧಿಸುವ ಬಗ್ಗೆ ಬೇಡಿಕೆ ಇತ್ತು. ಆದರೆ, ಆಗ ಹಲವು ಖಾತೆಗಳನ್ನು ನಿರ್ಬಂಧಿಸಲಾಗಿದ್ದರೂ, ರಾಯಿಟರ್ಸ್ ಎಕ್ಸ್ ಖಾತೆಯನ್ನು ನಿರ್ಬಂಧಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾನೂನು ಪ್ರಕ್ರಿಯೆ ಉಲ್ಲೇಖಿಸಿ ಚೀನಾದ ಗ್ಲೋಬಲ್ ಟೈಮ್ಸ್ ಮತ್ತು ಟರ್ಕಿಯ ಟಿಆರ್ಟಿ ವರ್ಲ್ಡ್ ಆನ್ ಎಕ್ಸ್ನ ಅಧಿಕೃತ ಖಾತೆಗಳನ್ನು ಸಹ ಮತ್ತೆ ನಿರ್ಬಂಧಿಸಲಾಗಿದೆ

ರಾಯಿಟರ್ಸ್ ಟೆಕ್ ನ್ಯೂಸ್, ರಾಯಿಟರ್ಸ್ ಫ್ಯಾಕ್ಟ್ ಚೆಕ್, ರಾಯಿಟರ್ಸ್ ಏಷ್ಯಾ ಮತ್ತು ರಾಯಿಟರ್ಸ್ ಚೀನಾದಂತಹ ಸಂಯೋಜಿತ ಎಕ್ಸ್ ಹ್ಯಾಂಡಲ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ, ರಾಯಿಟರ್ಸ್ನ ಅಧಿಕೃತ ಎಕ್ಸ್ ಖಾತೆಗಳು ಹಾಗೂ ರಾಯಿಟರ್ಸ್ ವರ್ಲ್ಡ್ ಹ್ಯಾಂಡಲ್ಗಳು ಲಭ್ಯವಾಗುತ್ತಿಲ್ಲ.

ಮುಖ್ಯ ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ‘ಕಾನೂನು ಪ್ರಕ್ರಿಯೆ ಭಾಗವಾಗಿ ರಾಯಿಟರ್ಸ್ ಖಾತೆಯನ್ನು ತಡೆಹಿಡಿಯಲಾಗಿದೆ’ ಎಂಬ ಸಂದೇಶ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.