ನವದೆಹಲಿ: ಗುಜರಾತ್ನ ವಡೋದರಾದಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ್ದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹರಿದಾಡಿತ್ತು. ಈ ಘಟನೆ ದೇಶದಾದ್ಯಂತ ಗಮನ ಸೆಳೆದಿತ್ತು.

ಇದೀಗ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಹ ಪ್ರತಿಕ್ರಿಯಿಸಿದ್ದು, ಇಂತಹ ಘಟನೆಗಳನ್ನು ನೋಡಿದಾಗ ಮನಸ್ಸಿಗೆ ತೀವ್ರ ನೋವುಂಟು ಮಾಡುತ್ತದೆ. ಈ ಘಟನೆ ಅತ್ಯಂತ ಭಯಾನಕ ಮತ್ತು ಕೋಪೋದ್ರಿಕ್ತವಾಗಿದೆ ಎಂದು ತಿಳಿಸಿದ್ದಾರೆ.
.ನೈಟ್ ಕ್ಲಬ್ನಲ್ಲಿ ಬೆಂಕಿ ಅವಘಡ: 59 ಸಾವು.₹88 ಕೋಟಿ ಮೌಲ್ಯದ ಮಾದಕವಸ್ತು ವಶ | ನಿರ್ದಾಕ್ಷಿಣ್ಯ ಕ್ರಮ: ಅಮಿತ್ ಶಾ.
ಈ ಘಟನೆ ಸಂಬಂಧ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅಪಘಾತದ ಚಿತ್ರವೊಂದನ್ನು ಹಂಚಿಕೊಂಡು ಪ್ರತಿಕ್ರಿಯಿಸಿದ್ದಾರೆ.

ಘಟನೆ ವಿವರ:

ಶುಕ್ರವಾರ (ಮಾರ್ಚ್ 14) ಮಧ್ಯರಾತ್ರಿ 12.30ರ ಸುಮಾರು ವಡೋದರಾ ನಗರದ ಕರೇಲಿಯಾಬಾಗ್ನ ಮುಕ್ತಾನಂದ ಕ್ರಾಸ್ ಬಳಿ ಈ ಅಪಘಾತ ನಡೆದಿದೆ. ಘಟನೆಯ ವಿಡಿಯೊ ಸಿಟಿಟಿವಿಯಲ್ಲಿ ದಾಖಲಾಗಿದ್ದು ವಡೋದರಾ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.

ವಾರಾಣಸಿ ಮೂಲದ 20 ವರ್ಷದ ಕಾನೂನು ವಿದ್ಯಾರ್ಥಿ ರಕ್ಷಿತ್ ಚೌರಾಸಿಯಾ ಎಂಬುವನು ತನ್ನ ಫೋಕ್ಸ್ವ್ಯಾಗನ್ ಕಾರನ್ನು ಚಲಾಯಿಸಿಕೊಂಡು ಮುಕ್ತಾನಂದ ಕ್ರಾಸ್ ಮಾರ್ಗವಾಗಿ ಹೊರಟಿದ್ದ. ಈ ವೇಳೆ ಭಾರಿ ವೇಗದಲ್ಲಿ ಬರುತ್ತಿದ್ದ ಕಾರು ಸ್ಕೂಟರ್ಗೆ ಡಿಕ್ಕಿಯಾಗಿತ್ತು. ನಂತರ ನಿಯಂತ್ರಣ ಕಳೆದುಕೊಂಡ ಕಾರು ಮುಂದೆ ಸಾಗುತ್ತಿದ್ದ ಕೆಲ ವಾಹನಗಳಿಗೆ ಹಾಗೂ ಪಾದಚಾರಿಗಳಿಗೂ ಡಿಕ್ಕಿಯಾಗಿತ್ತು.

ಡಿಕ್ಕಿಯ ಪರಿಣಾಮ ಸ್ಕೂಟರ್ನಲ್ಲಿದ್ದ ಹೇಮಾಲಿ ಪಟೇಲ್ ಎನ್ನುವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಂದು ಮಗು ಸೇರಿದಂತೆ ನಾಲ್ವರು ಗಾಯಗೊಂಡಿದ್ದರು

ಅಪಘಾತದ ಬಳಿಕ ರಕ್ಷಿತ್ ಚೌರಾಸಿಯಾ ಜೊತೆಗೆ ಮುಂದಿನ ಸೀಟಿನಲ್ಲಿದ್ದ ರಕ್ಷಿತ್ ಸ್ನೇಹಿತ ಮಿತ್ ಚೌಹಾಣ್ ಎಂಬ ಯುವಕ ಕಾರಿನಿಂದ ಇಳಿದು ಬಂದಿದ್ದಾನೆ. ‘ರಕ್ಷಿತ್ನಿಂದ ಅಪಘಾತವಾಯಿತು..’ ಎಂದು ಆತ ಆತಂಕದಿಂದ ರಕ್ಷಿತ್ನತ್ತ ಬೆರಳು ತೋರಿಸುತ್ತಿದ್ದ. ನಂತರ ಕಾರಿನಿಂದ ಕೆಳಗಿಳಿದು ಬಂದ ರಕ್ಷಿತ್, ‘ಇನ್ನೊಂದು ರೌಂಡ್, ಇನ್ನೊಂದು ರೌಂಡ್’ ಎಂದು ಅರಚುತ್ತಿದ್ದದ್ದು ವಿಡಿಯೊದಲ್ಲಿ ದಾಖಲಾಗಿದೆ.

ತಕ್ಷಣವೇ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ರಕ್ಷಿತ್ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು.
.ಕಂದಕಕ್ಕೆ ಉರುಳಿದ ವಾಹನ: 10 ಐಐಟಿ ವಿದ್ಯಾರ್ಥಿಗಳಿಗೆ ಗಾಯ, ಮೂವರ ಸ್ಥಿತಿ ಗಂಭೀರ.ಪಂಜಾಬ್ AAP ಸರ್ಕಾರಕ್ಕೆ 3 ವರ್ಷ: ಸ್ವರ್ಣ ಮಂದಿರಕ್ಕೆ ಕೇಜ್ರಿವಾಲ್,ಮಾನ್ ಭೇಟಿ.AR Rahman Health: ನಿರ್ಜಲೀಕರಣದಿಂದ ಆಸ್ಪತ್ರೆಗೆ ದಾಖಲು; ಮನೆಗೆ ಮರಳಿದ ರೆಹಮಾನ್.‘ಮೃತ್ಯು ಕುಂಭ’ ಎಂದವರಿಗೆ ಹೋಳಿ ಗಲಭೆ ನಿಯಂತ್ರಿಸಲು ಸಾಧ್ಯವಾಗಿಲ್ಲ: ಆದಿತ್ಯನಾಥ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.