ಸೆ.17ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಜರಾಂಗೆ ಅವರು 9ನೇ ದಿನಕ್ಕೆ ತಮ್ಮ ಉಪವಾಸವನ್ನು ಕೈಬಿಟ್ಟಿದ್ದಾರೆ.
ಅಂತರವಾಲಿ ಸಾರಥಿ ಗ್ರಾಮದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಜರಾಂಗೆ, ‘ಮರಾಠ ಸಮುದಾಯದ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿದ್ದೇನೆ. ಮರಾಠ ಸಮುದಾಯಕ್ಕೆ ನೋವುಂಟು ಮಾಡಿದವರಿಗೆ ಪಾಠ ಕಲಿಸುತ್ತೇವೆ’ ಎಂದರು.
ಮರಾಠ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಜರಾಂಗೆ ಕಳೆದ ಒಂದು ವರ್ಷದಲ್ಲಿ ನಡೆಸಿದ ಆರನೇ ಉಪವಾಸ ಸತ್ಯಾಗ್ರಹ ಇದಾಗಿತ್ತು.