ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ, ಉದ್ಯಮ ಮತ್ತು ಇತರೆ ಕ್ಷೇತ್ರಗಳಿಗೆ ಚೇತರಿಕೆ ನೀಡಲು ₹ 1350 ಕೋಟಿ ಗಾತ್ರದ ಆರ್ಥಿಕ ಪ್ಯಾಕೇಜ್ ಅನ್ನು ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಘೋಷಿಸಿದರು. ‘ಇದು, ಆರಂಭ. ಮುಂದೆ ಇನ್ನಷ್ಟು ಕೊಡುಗೆ ನೀಡಲಾಗುವುದು’ ಎಂದು ಶನಿವಾರ ತಿಳಿಸಿದರು.

ಎರಡು ದಶಕಗಳಿಂದಲೂ ಈ ಭಾಗದಲ್ಲಿ ನೊಂದಿರುವ ಸಾಗಣೆದಾರರು, ಹೌಸ್‌ಬೋಟ್ ಮಾಲೀಕರು, ಶಿಖರ ವಾಲಾಗಳು ಮತ್ತು ಇತರರಿಗೆ ನೆರವಾಗುವಂತೆ ವ್ಯವಸ್ಥಿತವಾದ ಪ್ಯಾಕೇಜ್ ಅನ್ನೂ ರೂಪಿಸಲಾಗುತ್ತಿದೆ ಎಂದೂ ಸಿನ್ಹಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಘೋಷಿಸಿರುವ ₹ 1350 ಕೋಟಿ ಗಾತ್ರದ ಪ್ಯಾಕೇಜ್, ಆತ್ಮನಿರ್ಭರ ಅಭಿಯಾನದಡಿಘೋಷಿಸಲಾಗಿರುವ ₹ 14,000 ಕೋಟಿ ಪ್ಯಾಕೇಜ್‌ಗೆ ಹೊರತಾಗಿದೆ. ಉಳಿದಂತೆ, ಎಲ್ಲ ಸಾಲಗಳಿಗೆ ಮಾರ್ಚ್ 2021ರವರೆಗೂ ಸ್ಟಾಂಪ್ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ಉದ್ಯಮಿಗಳು, ಯುವಜನರಿಗೆ ನೆರವಾಗಲು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ಬ್ಯಾಂಕ್‌ಗಳಲ್ಲಿ ವಿಶೇಷ ಡೆಸ್ಕ್ ಆರಂಭಿಸಲಾಗುವುದು ಎಂದು ತಿಳಿಸಿದರು.

ಈ ವರ್ಷದ ಆಗಸ್ಟ್‌ನಲ್ಲಿ ಲೆಫ್ಟಿನಂಟ್ ಗವರ್ನರ್ ಆಗಿ ನೇಮಕಗೊಂಡಿರುವ ಅವರು, ಕೇಂದ್ರಾಡಳಿತ ಪ್ರದೇಶದ ಪ್ರಗತಿಗೆ ಸರ್ಕಾರ ಬದ್ಧವಾಗಿದೆ. ಇಲ್ಲಿ 15–20 ವರ್ಷಗಳಿಂದಲೂ ಉದ್ಯಮ ನಲುಗಿದೆ. ಉದ್ಯಮಕ್ಕೆ ಚೇತರಿಕೆ ನೀಡಲು ಶೀಘ್ರವೇ ನೂತನ ನೀತಿಯನ್ನು ಪ್ರಕಟಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.