ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬಲಿಪಶುವಾದವರಿಗೆ 2019ಕ್ಕಿಂತ ಪೂರ್ವದಲ್ಲಿ ದಶಕಗಳ ಕಾಲ ನ್ಯಾಯವನ್ನು ನಿರಾಕರಿಸಲಾಗಿತ್ತು. ಅವರ ನೋವನ್ನು ಕೇಳುವವರೂ ಇರಲಿಲ್ಲ’ ಎಂದು ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ಮನೋಜ್ ಸಿನ್ಹಾ ಆರೋಪಿಸಿದ್ದಾರೆ.

90ರ ದಶಕದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಶ್ರೀನಗರದಲ್ಲಿ ಭಾನುವಾರ ಭೇಟಿಯಾದ ಬಳಿಕ ಅವರು ‘ಎಕ್ಸ್’ನಲ್ಲಿ ಸರಣಿ ಪೋಸ್ಟ್ಗಳನ್ನು ಮಾಡಿದ್ದಾರೆ. ‘2019ಕ್ಕಿಂತ ಮೊದಲು ಉಗ್ರರ ದಾಳಿಗೆ ಬಲಿಯಾದವರನ್ನು, ಅವರ ಕಟುಂಬವನ್ನು ಸಂಪೂರ್ಣ ಕಡೆಗಣಿಸಲಾಗಿತ್ತು. ಅವರ ಧ್ವನಿಯನ್ನು ಆಲಿಸುವರು ಇರಲಿಲ್ಲ. ಭಯೋತ್ಪಾದನೆಯ ಬೆಂಕಿಯಲ್ಲಿ ಸತ್ಯವನ್ನೂ ಸುಡಲಾಗಿತ್ತು’ ಎಂದಿದ್ದಾರೆ.

‘ಭಯೋತ್ಪಾದನೆಗೆ ಬಲಿಪಶುವಾದವರಿಗೆ ನ್ಯಾಯ ಒದಗಿಸಲು ಈಗ ಕೇಂದ್ರ ಕಟಿಬದ್ಧವಾಗಿದೆ. ಪಾಕಿಸ್ತಾನದ ಉಗ್ರರ ದಾಳಿಯಲ್ಲಿ ಮೃತಪಟ್ಟ ನೂರಾರು ಜನರ ಕುಟುಂಬಗಳಲ್ಲಿ ಇಂದು ಆತ್ಮಸ್ಥೈರ್ಯ ಮರಳಿದೆ’ ಎಂದು ಅವರು ಹೇಳಿದ್ದಾರೆ.

‘ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳ ಸದಸ್ಯರು ಸರ್ಕಾರಿ ಕೆಲಸಕ್ಕಾಗಿ ಜಿಲ್ಲಾಡಳಿತದ ಮೂಲಕ ಅರ್ಜಿ ಸಲ್ಲಿಸಬಹುದು. ಸ್ವಂತ ಉದ್ಯಮ ಸ್ಥಾಪಿಸುವವರಿಗೆ ಹಣಕಾಸಿನ ನೆರವೂ ಲಭಿಸಲಿದೆ. ಇನ್ನೂ ಎಫ್ಐಆರ್ ದಾಖಲಾಗದ ಪ್ರಕರಣಗಳಲ್ಲಿ, ಎಫ್ಐಆರ್ ದಾಖಲಿಸಿಕೊಂಡು ಪರಿಹಾರ, ಜಮೀನು ಹಂಚಿಕೆ ಮಾಡುವಂತೆಯೂ ಸೂಚಿಸಲಾಗಿದೆ’ ಎಂದು ಸಿನ್ಹಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.