ಚೆನ್ನೈ: ಎಐಎಡಿಎಂಕೆ ಉಚ್ಚಾಟಿತ ಶಾಸಕ ಕೆ. ಎ. ಸೆಂಗೊಟ್ಟೆಯನ್ ಮತ್ತು ಅವರ ಬೆಂಬಲಿಗರು ಗುರುವಾರ ನಟ, ರಾಜಕಾರಣಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಪನೈಯೂರ್ನಲ್ಲಿರುವ ಟಿವಿಕೆ ಪ್ರಧಾನ ಕಚೇರಿಗೆ ಆಗಮಿಸಿದ ಸೆಂಗೊಟ್ಟೆಯನ್, ಮಾಜಿ ಎಐಎಡಿಎಂಕೆ ಸಂಸದೆ ವಿ. ಸತ್ಯಭಾಮ ಸೇರಿದಂತೆ ಹಲವಾರು ಬೆಂಬಲಿಗರೊಂದಿಗೆ ವಿಜಯ್ ಅವರ ಸಮ್ಮುಖದಲ್ಲಿ ಟಿವಿಕೆ ಸೇರಿದ್ದಾರೆ.

ಸೆಂಗೊಟ್ಟೆಯನ್ ಅವರಿಗೆ ಪಕ್ಷದ ಶಾಲು ಹೊದಿಸಿ ಸ್ವಾಗತಿಸಿ ವಿಜಯ್, ಅವರನ್ನು ಕೊಯಮತ್ತೂರು, ಈರೋಡ್, ತಿರುಪ್ಪೂರು ಮತ್ತು ನೀಲಗಿರಿ ಜಿಲ್ಲೆಗಳಿಗೆ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.

ಸೆಂಗೊಟ್ಟೆಯನ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕೊಂಗು ಪ್ರದೇಶದಲ್ಲಿ ವಿಶೇಷವಾಗಿ ಅವರ ಹುಟ್ಟೂರಾದ ಈರೋಡ್ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಟಿವಿಕೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಂಬತ್ತು ಬಾರಿ ಶಾಸಕರಾಗಿರುವ ಸೆಂಗೊಟ್ಟೆಯನ್, ನವೆಂಬರ್ 26ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಿ.ಎಚ್. ಮನೋಜ್ ಪಾಂಡಿಯನ್ ನಂತರ ರಾಜೀನಾಮೆ ನೀಡಿದ ಎರಡನೇ ಎಐಎಡಿಎಂಕೆ ಶಾಸಕರಾಗಿದ್ದಾರೆ. ಪಾಂಡಿಯನ್ ಆಡಳಿತಾರೂಢ ಡಿಎಂಕೆ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.