ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಉತ್ತರ ಪ್ರದೇಶದಲ್ಲಿ ಟಾಯ್ಲೆಟ್‌ ಒಳಗೆ ಊಟ ಸೇವಿಸಿದ ಬಾಲಕ, ಬಾಲಕಿಯರು

Last Updated 20 ಸೆಪ್ಟೆಂಬರ್ 2022, 7:25 IST
ಅಕ್ಷರ ಗಾತ್ರ

ನವದೆಹಲಿ: ಬಾಲಕಿಯರು ಒಳಗೊಂಡಂತೆ ಕಿರಿಯ ವಯಸ್ಸಿನ ಕಬಡ್ಡಿ ಆಟಗಾರರು ಪುರುಷರ ಶೌಚಾಲಯದ ಒಳಗೆ ಊಟ ಮಾಡುತ್ತಿರುವ ವಿಡಿಯೊ ಒಂದನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಪುರುಷರ ಶೌಚಾಲಯದ ಒಳಗೆ ಬಾಲಕ, ಬಾಲಕಿಯರು ಊಟ ಮಾಡುತ್ತಿರುವುದು ದೃಶ್ಯದಲ್ಲಿದೆ. ನೆಲದ ಮೇಲೆ ಇಡಲಾದ ಅನ್ನ ಮತ್ತು ಸಾರನ್ನು ವಿದ್ಯಾರ್ಥಿಗಳು ಬಡಿಸಿಕೊಂಡು ಊಟ ಮಾಡುತ್ತಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಸುಳ್ಳು ಪ್ರಚಾರ ಮಾಡಲು ಕೋಟ್ಯಂತರ ರೂಪಾಯಿ ಇದೆ. ಆದರೆ ನಮ್ಮ ಕ್ರೀಡಾಪಟುಗಳಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲು ಹಣವಿಲ್ಲ. ಇಂತಹ ಸರ್ಕಾರಕ್ಕೆ ಧಿಕ್ಕಾರ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ವಿಡಿಯೊದಲ್ಲಿರುವ ಬಾಲಕ ಮತ್ತು ಬಾಲಕಿಯರು ಉತ್ತರ ಪ್ರದೇಶದ ಕಬಡ್ಡಿ ಆಟಗಾರರು ಎಂದು ಕಾಂಗ್ರೆಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT