ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ನಗರವು ಪಾಕ್‌ ಆಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ: ಕಂಗನಾ ವಿವಾದ

Last Updated 3 ಸೆಪ್ಟೆಂಬರ್ 2020, 13:09 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಮುಂಬೈ ನಗರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ ಎಂದು ಬಾಲಿವುಡ್‌ ನಟಿ ಕಂಗನಾ ರನೋಟ್‌ ಪ್ರಶ್ನಿಸಿದ್ದಾರೆ. ಆ ಮೂಲಕ ವಿವಾದದ ಕಿಡಿಯೊಂದನ್ನುಅವರು ಹೊತ್ತಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, 'ಶಿವಸೇನಾನಾಯಕ ಸಂಜಯ್‌ ರಾವತ್ ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ನಾನು ಮುಂಬೈಗೆ ಹಿಂತಿರುಗಬಾರದೆಂದು ಅವರು ಹೇಳಿದ್ದಾರೆ. ಈ ಹಿಂದೆ ಮುಂಬೈನ ಬೀದಿ ಗೋಡೆಗಳ ಮೇಲೆ ಆಜಾದಿಯ ಬರಹಗಳು ಕಾಣಿಸಿಕೊಳ್ಳುತ್ತಿದ್ದವು. ಈಗ ಬಹಿರಂಗ ಬೆದರಿಕೆಗಳು ಕೇಳಿಬರುತ್ತಿವೆ. ಮುಂಬೈ ನಗರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಏಕೆ ಭಾಸವಾಗುತ್ತಿದೆ?' ಎಂದು ಕಂಗನಾ ರನೋಟ್ ತಿಳಿಸಿದ್ದಾರೆ.

ಶಿವಸೇನಾಮುಖವಾಣಿ ಸಾಮ್ನಾದಲ್ಲಿ ಕಂಗನಾ ವಿರುದ್ಧ ವಾಗ್ದಾಳಿ ನಡೆಸಿದ್ದ ಸಂಜಯ್‌ ರಾವತ್, 'ಈ ಹಿಂದೆ ನಗರದಲ್ಲಿ ವಾಸವಾಗಿದ್ದರೂ ಮುಂಬೈ ಪೊಲೀಸರ ಮೇಲೆ ಬೆರಳು ತೋರಿಸುತ್ತಿರುವ ಅವರ ವಿಶ್ವಾಸಘಾತುಕತನ ನಾಚಿಕೆಗೇಡಿನ ಸಂಗತಿ' ಎಂದಿದ್ದರು.

'ಮುಂಬೈಗೆ ದಯಮಾಡಿ ಬರಬಾರದೆಂದು ನಾವು ಅವರನ್ನು ವಿನಂತಿಸುತ್ತೇವೆ. ಇದು ಮುಂಬೈ ಪೊಲೀಸರಿಗೆ ಮಾಡಿದ ಅವಮಾನವಲ್ಲದೇ ಮತ್ತೇನಲ್ಲ. ಗೃಹ ಸಚಿವಾಲಯ ಈ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದು ಅವರು ಸಾಮ್ನಾದಲ್ಲಿ ಬರೆದಿದ್ದರು.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರ ಕಾರ್ಯವೈಖರಿಯ ಬಗ್ಗೆ ಕಂಗನಾ ಹಲವು ಪ್ರಶ್ನೆಗಳನ್ನು ಈ ಹಿಂದೆ ಎತ್ತಿದ್ದರು.

ಕಂಗನಾ ನೀಡಿರುವ ಮುಂಬೈ ಬಗೆಗಿನಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಆರಂಭವಾಗಿದೆ. ಕಂಗನಾ ಅವರ ಹೇಳಿಕೆಗೆ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಕೆಲವರು ಶಿವಸೇನೆ ನಾಯಕ ಸಂಜಯ್‌ ರಾವತ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಂಗನಾ ಹೇಳಿಕೆಗೆ ಟ್ವಿಟರ್‌ನಲ್ಲಿ ಪ್ರಕಟವಾದ ಪ್ರತಿಕ್ರಿಯೆಗಳು ಇಲ್ಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT