ನವದೆಹಲಿ: ಉದ್ಯಮಿ ಸಂಜಯ್ ಕಪೂರ್ ಅವರ ಪತ್ನಿ ಪ್ರಿಯಾ ಕಪೂರ್ ಅವರು, ‘ಸಂಜಯ್ ಅವರ ಮಾಜಿ ಪತ್ನಿ ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳು ಕುಟುಂಬದ ಟ್ರಸ್ಟ್ನಿಂದ ಈಗಾಗಲೇ ₹1,900 ಕೋಟಿ ಪಡೆದಿದ್ದಾರೆ’ ಎಂದು ದೆಹಲಿ ಹೈಕೋರ್ಟ್ಗೆ ಬುಧವಾರ ತಿಳಿಸಿದರು.

ದಿವಂಗತರಾದ ತಂದೆಯ ಆಸ್ತಿಯಲ್ಲಿ ಪಾಲು ಕೇಳಿ ಕರಿಷ್ಮಾ ಕಪೂರ್ ಅವರ ಮಕ್ಕಳು ಕೋರ್ಟ್ ಮೆಟ್ಟಿಲೇರಿದ್ದರು ಮತ್ತು ಸಂಜಯ್ ಕಪೂರ್ ಅವರ ಉಯಿಲಿನ ಸತ್ಯಾಸತ್ಯತೆಯನ್ನೂ ಅವರು ಪ್ರಶ್ನಿಸಿದ್ದರು.

ಸಂಜಯ್ ಅವರು ಬರೆದಿಟ್ಟಿರುವ ಉಯಿಲು ನೋಂದಣಿಯಾಗದಿದ್ದರೂ ಅದು ಅನೂರ್ಜಿತ ಅಲ್ಲ ಎಂದು ಪ್ರಿಯಾ ಅವರ ಪರ ವಕೀಲರು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿಗೆ ತಿಳಿಸಿದರು.

ವಾದ ಆಲಿಸಿದ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.