ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kerala Bomb Blast | ಹಿಂಸೆಯ ಸಂಸ್ಕೃತಿ ಸಹಿಸುವುದು ಅಸಾಧ್ಯ: ಕೇರಳ ರಾಜ್ಯಪಾಲ

Published 30 ಅಕ್ಟೋಬರ್ 2023, 14:06 IST
Last Updated 30 ಅಕ್ಟೋಬರ್ 2023, 14:06 IST
ಅಕ್ಷರ ಗಾತ್ರ

ಕೊಚ್ಚಿ: ಹಿಂಸೆಯ ಸಂಸ್ಕೃತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಳಮಶ್ಶೇರಿ ಬಾಂಬ್‌ ಬ್ಲಾಸ್ಟ್‌ ಪ್ರಕರಣದ ಸಂಬಂಧ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್‌ ಖಾನ್‌ ಪ್ರತಿಕ್ರಿಯಿಸಿದ್ದಾರೆ.

ದುರಂತದಲ್ಲಿ ಗಾಯಗೊಂಡು ಕಳಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾದ ಬಳಿಕ ಅವರು ಮಾಧ್ಯಮದವರೊಂದಿ‌ಗೆ ಮಾತನಾಡಿದರು.

ಪ್ರಕರಣವನ್ನು ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸುತ್ತಿದೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಶ್ನೆಗೆ ಉತ್ತರಿಸಲು ಇದು ಸರಿಯಾದ ಸಮಯವಲ್ಲ. ಏನಾದರೂ ಲೋಪಗಳಾದಲ್ಲಿ ಭವಿಷ್ಯದಲ್ಲಿ ಈ ಪ್ರಶ್ನೆಯನ್ನು ನೀವು ಕೇಳಬಹು’ ಎಂದರು.

‘ಈಗ ಎರಡು ಸಂಗತಿಗಳಿವೆ. ಒಂದು ಸಹಾನುಭೂತಿ ವ್ಯಕ್ತಪಡಿಸುವುದು. ಎರಡನೆಯದು ಹಿಂಸೆಯ ಸಂಸ್ಕೃತಿಯನ್ನು ನಾವು ಸಹಿಸಿಕೊಳ್ಳಬಾರದು. ಇದು ಪ್ರಜಾಪ್ರಭುತ್ವಕ್ಕೆ ಅಸಹ್ಯ. ಕಾನೂನಿಗೆ ಮತ್ತು ನಾಗರಿಕ ಸಮಾಜಕ್ಕೂ ಇದು ಅಸಹ್ಯ. ಕಾನೂನು ಕೈಗೆತ್ತಿಕೊಂಡು ಜನರ ಜೀವದ ಜತೆ ಆಟವಾಡಲು ಬಿಡಬಾರದು’ ಎಂದು ಅವರು ಹೇಳಿದರು.

ಈ ಕೃತ್ಯಕ್ಕೆ ನಾವು ಯಾರನ್ನೂ ದೂಷಿಸಲಾಗದು. ಪರಸ್ಪರರನ್ನು ಗೌರವಿಸುವ ಬಗ್ಗೆ ನಾವು ಜಾಗೃತಿ ಮೂಡಿಸಬಹುದು. ಈ ರೀತಿಯ ಕೊಳಕು ಘಟನೆ ಮತ್ತೆಂದೂ ಸಂಭವಿಸುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT