ತಿರುವನಂತಪುರಂ: ಕೋವಿಡ್-19ಲಾಕ್‌ಡೌನ್ ಆಗಿರುವ ಹೊತ್ತಲ್ಲಿ ಖುಷಿ ಅನುಭವಿಸುತ್ತಿರುವ ಪ್ರಾಣಿಗಳುಕೇರಳದ ಆನೆಗಳು. ಮಾರ್ಚ್- ಏಪ್ರಿಲ್ ತಿಂಗಳು ಕೇರಳದ ದೇವಾಲಯಗಳಲ್ಲಿ ಜಾತ್ರೆಯ ಕಾಲ.ಇಲ್ಲಿನ ಜಾತ್ರೆಗಳಲ್ಲಿ ಆನೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಪ್ರಾಣಿ ದಯಾ ಸಂಘದ ನಿಯಮಗಳನ್ನು ಉಲ್ಲಂಘಿಸಿ ಸುಡು ಬಿಸಿಲಿನಲ್ಲಿಯೂ ಆನೆಗಳ ಮೆರವಣಿಗೆ ನಡೆಯುತ್ತದೆ. ಹೀಗೆ ಜಾತ್ರೆಗಳ ನಡುವೆ ಆನೆ ರೊಚ್ಚಿಗೆದ್ದು ಓಡಿ ಜನರಿಗೆ ಪ್ರಾಣ ಹಾನಿ ಉಂಟಾದ ಘಟನೆಗಳೂ ಸಾಕಷ್ಟಿವೆ.

ಏತನ್ಮಧ್ಯೆ, ಲಾಕ್‌ಡೌನ್‌ನಿಂದಾಗಿ ಕೇರಳದಲ್ಲಿ ಸುಮಾರು 1,000 ದೇವಾಲಯಗಳು ಜಾತ್ರೆ ರದ್ದು ಮಾಡಿವೆ. ಇದರಿಂದಾಗಿ ಸುಮಾರು 500 ಆನೆಗಳು ನಿರಾಳವಾಗಿವೆ.ಅತೀ ದೊಡ್ಡ ಜಾತ್ರೆ ಎಂದು ಕರೆಯಲ್ಪಡುವ ತ್ರಿಶ್ಶೂರ್ ಪೂರಂನಲ್ಲಿ ಸುಮಾರು 30 ಆನೆಗಳು ಪಾಲ್ಗೊಳ್ಳುತ್ತವೆ. ಕೊರೊನಾವೈರಸ್ ಕಾರಣಮೇ.3ರಂದು ನಡೆಯಲಿರುವ ತ್ರಿಶ್ಶೂರ್ ಪೂರಂನ್ನು ಕೂಡಾ ರದ್ದಾಗುವ ಸಾಧ್ಯತೆ ಇದೆ.

ಈ ಬಗ್ಗೆ 'ಪ್ರಜಾವಾಣಿ' ಜತೆ ಮಾತನಾಡಿದ ಕೇರಳ ಆನೆ ಮಾಲೀಕರ ಸಂಘಟನೆಯ ಕಾರ್ಯದರ್ಶಿ ಕೆ. ಶಶಿಕುಮಾರ್, ತ್ರಿಶ್ಶೂರ್ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ನಿಗದಿಯಾಗಿದ್ದ 55 ಜಾತ್ರೆಗಳನ್ನು ರದ್ದು ಮಾಡಲಾಗಿದೆ. ಒಟ್ಟಾರೆ ಈ ವರ್ಷ ಕೇರಳದಲ್ಲಿ ಸುಮಾರು 1000 ದೇವಾಲಯಗಳ ಜಾತ್ರೆ ರದ್ದಾಗಿದೆ ಎಂದಿದ್ದಾರೆ.

ಜಾತ್ರೆಗಳಲ್ಲಿ ಆನೆಗಳು ಅನುಭವಿಸುವ ಮಾನಸಿಕ ಮತ್ತು ದೈಹಿಕ ಕಿರುಕುಳದಿಂದ ಅವುಗಳಿಗೆ ಮುಕ್ತಿ ಸಿಕ್ಕಿದೆ. ಜಾತ್ರಾ ಸಮಯಗಳಲ್ಲಿ ಅವುಗಳಿಗೆ ಸರಿಯಾದ ವಿಶ್ರಾಂತಿ ನೀಡದೆ ದೀರ್ಘಕಾಲ ನಿಲ್ಲುವ ಅಥವಾ ಗಂಟೆಗಳ ಕಾಲ ನಡೆಯುವ ಕೆಲಸ ನೀಡಲಾಗುತ್ತಿತ್ತು. ಹೀಗಿರುವಾಗ ಲಾಕ್‍ಡೌನ್ ಅವುಗಳಿಗೆ ವರವಾಗಿ ಪರಿಣಮಿಸಿದೆ ಎಂದುಪ್ರಾಣಿಗಳ ಹಕ್ಕು ಕಾರ್ಯಕರ್ತ ವಿ.ಕೆ ವೆಂಕಿಟಾಚಲಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.