ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಔಷಧ ತಯಾರಿಕಾ ಕಾರ್ಖಾನೆಯೊಂದರಿಂದ ಪೊಲೀಸರು ಅಂದಾಜು ₹88.92 ಕೋಟಿ ಮೊತ್ತದ ನಿಷೇಧಿತ ‘ಕೆಟಮೈನ್’ ವಶಕ್ಕೆ ಪಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ರಾಯಗಢ ಜಿಲ್ಲೆಯ ಮಹಾಡ್ ಎಂಐಡಿಸಿ ಪ್ರದೇಶದ ಜೈಟೆ ಗ್ರಾಮದಲ್ಲಿ ಈ ಔಷಧ ತಯಾರಿಕಾ ಘಟಕ ಇತ್ತು. ಖಚಿತ ಮೂಲಗಳನ್ನು ಆಧರಿಸಿ, ಮುಂಬೈ ಪೊಲೀಸರು, ಮಾದಕವಸ್ತು ನಿಗ್ರಹ ಘಟಕದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.

ಔಷಧ ಕಾರ್ಖಾನೆಯ ಮಹೀಂದ್ರ ಭೋಸಲೆ, ಸುಶಾಂತ್ ಪಾಟೀಲ್, ಸುಭಂ ಸುತಾತ್ ಮತ್ತು ರೋಹನ್ ಗವಾಸ್ ಅವರನ್ನು ಬಂಧಿಸಲಾಗಿದೆ.

ಕೆಟಮೈನ್ ನಿಷೇಧಿತ ಮಾದಕ ವಸ್ತು. ಇದನ್ನು ಅರವಳಿಕೆ ಔಷಧವಾಗಿಯೂ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.