ಇಸ್ಲಾಮಾಬಾದ್: ‘ಭಾರತ ತಂಡವು ಏಷ್ಯಾ ಕಪ್ ಟೂರ್ನಿಯಲ್ಲಿ ಜಯಿಸಿರುವ ಟ್ರೋಫಿ ಯನ್ನು ದುಬೈನಲ್ಲಿರುವ ಎಸಿಸಿ ಕಚೇರಿ ಯಿಂದ ತೆಗೆದುಕೊಳ್ಳಲು ಸ್ವಾಗತಿಸುತ್ತೇನೆ. ನಾನು ಅವರಿಗೆ ಟ್ರೋಫಿ ಹಸ್ತಾಂತರಿಸಲು ಸಿದ್ಧ’ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹಸಿನ್ ನಕ್ವಿ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರೂ ಆಗಿರುವ ನಕ್ವಿ ಅವರು ‘ಎಕ್ಸ್‘ನಲ್ಲಿ ಸಂದೇಶ ಹಾಕಿದ್ದಾರೆ. ‘ಎಸಿಸಿ ಅಧ್ಯಕ್ಷನಾಗಿ ನಾನು ಟ್ರೋಫಿಯನ್ನು ಭಾರತ ತಂಡಕ್ಕೆ ಹಸ್ತಾಂತರಿಸಲು ಈಗಲೂ ಸಿದ್ಧ. ಅವರಿಗೆ ‘ನಿಜಕ್ಕೂ ಟ್ರೋಫಿ ಪಡೆಯುವ ಆಸೆ ಇದ್ದರೆ ದುಬೈನಲ್ಲಿರುವ ಎಸಿಸಿ ಕಚೇರಿಗೆ ಬಂದು ಟ್ರೋಫಿ ಪಡೆಯಲಿ. ಅವರನ್ನು ನಾನು ಸ್ವಾಗತಿಸುವೆ’ ಎಂದು ಉಲ್ಲೇಖಿಸಿದ್ದಾರೆ।

ಕಳೆದ ಭಾನುವಾರ ದುಬೈನಲ್ಲಿ ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ತಂಡವು ಪಾಕಿಸ್ತಾನದ ಎದುರು ಜಯಿಸಿತ್ತು. ಪಾಕಿಸ್ತಾನದ ಸಚಿವರೂ ಆಗಿರುವ ಮೊಹಸಿನ್ ನಕ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಸೂರ್ಯಕುಮಾರ್ ಯಾದವ್ ಬಳಗವು ನಿರಾಕರಿಸಿತ್ತು.

ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಟ್ರೋಫಿಪ್ರದಾನ ಮಾಡುವುದು ತಮ್ಮ ಹಕ್ಕು ಎಂದು ಪ್ರತಿಪಾದಿಸಿದ ನಕ್ವಿ ಅವರು ಟ್ರೋಫಿಯೊಡನೆ ಹೊರಟುಹೋಗಿದ್ದರು.

ಪ್ರಶಸ್ತಿಪ್ರದಾನ ಸಮಾರಂಭ ಒಂದು ಗಂಟೆ ತಡವಾಗಿತ್ತು. ಅನೌನ್ಸರ್ ಆಗಿದ್ದ ನ್ಯೂಜಿಲೆಂಡ್ನ ಮಾಜಿ ವೇಗಿ ಸೈಮನ್ ಡೂಲ್ ಅವರು ‘ಭಾರತ ತಂಡ ಇವತ್ತಿನ ರಾತ್ರಿ ಟ್ರೋಫಿಯನ್ನು ಸ್ವೀಕರಿಸುತ್ತಿಲ್ಲ ಎಂದು ಎಸಿಸಿ ತನಗೆ ತಿಳಿಸಿದೆ ಎಂದು ಹೇಳಿದ್ದರು.

ನಕ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಬಾರ ದೆಂಬುದು ತಂಡದ ನಿರ್ಧಾರವಾಗಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ತಂಡದ ನಾಯಕ ಸೂರ್ಯಕುಮಾರ್ ಪ್ರತಿಕ್ರಿಯಿಸಿದ್ದರು.
.ಏಷ್ಯಾ ಕಪ್ ಟ್ರೋಫಿ ‘ಹೊತ್ತೊಯ್ದ’ ನಕ್ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.