ಪ್ರಯಾಗರಾಜ್: ಮಾಹಾ ಕುಂಭಮೇಳಕ್ಕೆ ಬೆದರಿಕೆ ಹಾಕಿರುವ ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂ ವಿರುದ್ಧ ಅಖಾಡ ಪರಿಷತ್ ಕಿಡಿ ಕಾರಿದೆ. ಇದು ಸಮುದಾಯಗಳ ನಡುವೆ ಭಿನ್ನತೆ ಉಂಟು ಮಾಡುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮಹಾ ಕುಂಭಮೇಳನ್ನು ಗುರಿಯಾಗಿಸಿ ಪನ್ನೂ ಬಿಡುಗಡೆ ಮಾಡಿದ ವಿಡಿಯೊಗೆ ಅಖಾಡ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.
.ಉತ್ತರ ಪ್ರದೇಶ: ಎನ್ಕೌಂಟರ್ನಲ್ಲಿ ಮೂವರು ಖಾಲಿಸ್ತಾನಿ ಭಯೋತ್ಪಾದಕರ ಹತ್ಯೆ.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಖಾಲಿಸ್ತಾನಿ ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಹೀಗಾಗಿ ಪನ್ನೂ ಮಹಾ ಕುಂಭಮೇಳಕ್ಕೆ ಬೆದರಿಕೆ ಹಾಕಿದ್ದ.

ಮಹಾಕುಂಭ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಖಿಲ ಭಾರತೀಯ ಅಖಾಡ ಪರಿಷತ್ನ ಅಧ್ಯಕ್ಷ ಮಹಾಂತ ರವೀಂದ್ರ ಪುರಿ, ಪನ್ನೂ ಎಂಬ ವ್ಯಕ್ತಿ ನಮ್ಮ ಮಹಾಕುಂಭಕ್ಕೆ ಪ್ರವೇಶಿಸಲು ಧೈರ್ಯ ಮಾಡಿದರೆ, ಅವನನ್ನು ಹೊಡೆದು ಓಡಿಸಲಾಗುತ್ತದೆ. ಇಂತಹ ನೂರಾರು ಹುಚ್ಚರನ್ನು ನಾವು ನೋಡಿದ್ದೇವೆ’ ಎಂದು ಕಿಡಿಕಾರಿದ್ದಾರೆ.
.ಖಾಲಿಸ್ತಾನಿ ಉಗ್ರ ಅರ್ಷ್ ದಲ್ಲಾ ಒಪ್ಪಿಸುವಂತೆ ಭಾರತ ಮನವಿ.
ಇದು ಸಿಖ್ಖರು ಮತ್ತು ಹಿಂದೂಗಳು ಒಗ್ಗೂಡಿರುವ ಮಾಘ ಮೇಳ. ವಿಭಜನೆಯನ್ನು ಪ್ರಚೋದಿಸುವ ಪನ್ನೂ ಅವರ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ. ಇದು ನಮ್ಮ ಸನಾತನ ಸಂಪ್ರದಾಯವನ್ನು ಜೀವಂತವಾಗಿಟ್ಟಿರುವ ಸಿಖ್ ಸಮುದಾಯವಾಗಿದೆ. ಅವರು ಸನಾತನ ಧರ್ಮವನ್ನು ರಕ್ಷಿಸಿದ್ದಾರೆ ಎಂದು ಮಹಾಂತ ಪುರಿ ಹೇಳಿದ್ದಾರೆ.
.ಖಾಲಿಸ್ತಾನಿ ಬೆಂಬಲಿಗರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿ ಅಮಾನತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.