ನವದೆಹಲಿ: ಆರ್.ಜಿ ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಮತ್ತು ವಿಧಿವಿಜ್ಞಾನ ಪರೀಕ್ಷೆ ವರದಿ ಕುರಿತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್ ) ತಜ್ಞರೊಂದಿಗೆ ಸಿಬಿಐ ಚರ್ಚೆ ನಡೆಸಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
ಸಿಬಿಐ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆಯಲು ವರದಿಗಳನ್ನು ಏಮ್ಸ್‌ಗೆ ಕಳುಹಿಸಲಿದೆ. ಇದರಿಂದ ಆರೋಪಿ ಸಂಜಯ್ ರಾಯ್ ಒಬ್ಬನೇ ಕೃತ್ಯ ಎಸಗಿದ್ದನೇ ಅಥವಾ ಇತರರು ಭಾಗಿಯಾಗಿದ್ದರೇ ಎಂಬ ಬಗ್ಗೆ ತನಿಖೆಗೆ ನೆರವಾಗಲಿದೆ ಎಂದು ಹೇಳಿದರು.
ಪ್ರಕರಣದ ತನಿಖೆಯನ್ನು ಆಗಸ್ಟ್ 14ರಿಂದ ಸಿಬಿಐ ವಹಿಸಿಕೊಂಡಿದೆ.