ಕೋಲ್ಕತ್ತ: ಅತ್ಯಾಚಾರ ಪ್ರಕರಣದಲ್ಲಿ ವ್ಯಕ್ತಿಯೊಬ್ಬ 51 ದಿನ ಜೈಲಿನಲ್ಲಿ ಕಳೆದ ಬಳಿಕ ದೂರುದಾರ ಮಹಿಳೆ ಮನಸ್ತಾಪದಿಂದಾಗಿ ದೂರು ದಾಖಲಿಸಿರುವುದಾಗಿ ಹೇಳಿಕೊಂಡಿದ್ದು. ಕೋಲ್ಕತ್ತದ ನ್ಯಾಯಾಲಯವು ಆಪಾದಿತ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ. .

2020ರ ನವೆಂಬರ್ 24ರಂದು ದಾಖಲಾಗಿದ್ದ ಪ್ರಕರಣದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿತ್ತು. ನ್ಯಾಯಾಲಯವು ಆತನಿಗೆ ಜಾಮೀನು ನೀಡುವವರೆಗೆ 51 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು.

2017ರಿಂದ ತಾನು ಆ ವ್ಯಕ್ತಿಯೊಂದಿಗೆ ಸ್ನೇಹ ಹೊಂದಿದ್ದೇನೆ, ಆತ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ಮೇರೆಗೆ ಸಾಲ್ಟ್ ಲೇಕ್ನಲ್ಲಿರುವ ಹೋಟೆಲ್ನಲ್ಲಿ ಆತನೊಂದಿಗೆ ರಾತ್ರಿ ಕಳೆದಿದ್ದೇನೆ. ಅಲ್ಲಿ ಆತ ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಅದಾದ ಮರುದಿನ ಬೆಳಿಗ್ಗೆ, ಆತನು ನನ್ನನ್ನು ಮದುವೆಯಾಗಲು ನಿರಾಕರಿಸಿ ಓಡಿಹೋದನು ಎಂದು ಮಹಿಳೆ ಆರೋಪಿಸಿದ್ದರು.

ಎಫ್ಐಆರ್ ಆಧಾರದ ಮೇಲೆ ವ್ಯಕ್ತಿಯನ್ನು 2020ರ ನವೆಂಬರ್ 25ರಂದು ಬಂಧಿಸಲಾಗಿತ್ತು. 2021ರ ಜನವರಿಯಲ್ಲಿ ಜಾಮೀನು ಸಿಕ್ಕಿತ್ತು.

ತನಿಖೆ ವೇಳೆ ಮಹಿಳೆ, ಆ ವ್ಯಕ್ತಿ ಜೊತೆಗಿನ ಮನಸ್ತಾಪದಿಂದ ದೂರು ನೀಡಿದ್ದೇನೆ. ಬೇರೆ ಏನೂ ನನಗೆ ನೆನಪಿಲ್ಲ ಎಂದಿದ್ದಾರೆ. ದೂರಿನ ಪ್ರತಿಯನ್ನು ನನ್ನ ಸ್ನೇಹಿತ ಬರೆದಿದ್ದು, ಅದರಲ್ಲಿ ಏನಿದೆ ಎಂದು ನನಗೆ ತಿಳಿದಿರಲಿಲ್ಲ. ಸಹಿ ಹಾಕಿದೆ ಎಂದಿದ್ದಾರೆ.

ಇಬ್ಬರೂ ಒಪ್ಪಿಗೆ ಮೇರೆಗೆ ಲೈಂಗಿಕ ಸಂಬಂಧ ಬೆಳೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ನೀಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.