ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡವು ಟಾಸ್ ಗೆದಿದ್ದು, ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

ಕೊನೆಯ ಬಾರಿ 2023ರ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತವು, ಸತತ 20 ಏಕದಿನ ಪಂದ್ಯಗಳ ನಂತರ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ ಟಾಸ್ ಗೆಲ್ಲುವಲ್ಲಿ ಸಫಲವಾಗಿದೆ.

ಟಾಸ್ ವೇಳೆ ದಕ್ಷಿಣ ಆಫ್ರಿಕಾ ನಾಯಕ ಬವುಮಾ ಟೇಲ್ಸ್ ಎಂದು ಹೇಳಿದ್ದರು. ಅದು ಹೆಡ್ಸ್ ಆಗಿತ್ತು. ಕೊನೆಗೂ ಟಾಸ್ ಗೆದ್ದ ಖುಷಿಗೆ ರಾಹುಲ್ ಸಂಭ್ರಮಿಸಿದ್ದರು.

ಎರಡು ವರ್ಷಗಳ ಬಳಿಕ ಟಾಸ್ ಗೆದಿದ್ದರಿಂದ ಮೈದಾನದಲ್ಲಿದ್ದ ಅಭಿಮಾನಿಗಳು ಕೂಡ ಹರ್ಷೋದ್ಗಾರ ಮಾಡಿದರು.

ಟಾಸ್ ವೇಳೆ ಮಾತನಾಡಿದ ರಾಹುಲ್ ‘ಮುರುಳಿ ಕಾರ್ತಿಕ್ ಅವರು ಟಾಸ್ ವೇಳೆ ಇದಿದ್ದು ಭಾರತಕ್ಕೆ ಅದೃಷ್ಟವಾಗಿ ಪರಿಣಮಿಸಿತು. ನೀವು ಇನ್ನಷ್ಟು ಟಾಸ್ ಗೆಲ್ಲಿಸಬೇಕು’ ಎಂದು ಕಾಲೆಳೆದರು.

ಟೀಂ ಇಂಡಿಯಾ ಟಾಸ್ ಗೆದ್ದ ನಂತರ ಪ್ರತಿಕ್ರಿಯಿಸಿದ ಮಾಜಿ ಆಟಗಾರ ಸಂಜಯ್ ಬಂಗಾರ್ ‘ನಾಯಕ ರಾಹುಲ್ ಅವರು ಟಾಸ್ ವೇಳೆ ಸಾಮಾನ್ಯವಾಗಿ ಬಲಗೈ ಬಳಸುತ್ತಿದ್ದರು. ಈ ಪಂದ್ಯದಲ್ಲಿ ಎಡಗೈ ಮೂಲಕ ನಾಣ್ಯವನ್ನು ಚಿಮ್ಮುವ ತಂತ್ರ ಮಾಡಿದ್ದು ಟಾಸ್ ಗೆಲ್ಲುವಲ್ಲಿ ನೆರವಾಯಿತು’ ಎಂದಿದ್ದಾರೆ.

ಮೂರು ಪಂದ್ಯಗಳ ಸರಣಿಯು 1–1ರಲ್ಲಿ ಸಮಬಲವಾಗಿದ್ದು, ಸರಣಿ ಗೆಲ್ಲಲು ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ.
.IND vs SA | ಕೊನೆಗೂ ಟಾಸ್ ಗೆದ್ದ ಭಾರತ: ತಂಡದಲ್ಲಿ ಒಂದು ಪ್ರಮುಖ ಬದಲಾವಣೆ.ವಿಶಾಖಪಟ್ಟಣದಲ್ಲಿ ಕೊಹ್ಲಿಯೇ ಕಿಂಗ್: ಈ ಮೈದಾನದಲ್ಲಿ ಹೇಗಿದೆ ವಿರಾಟ್ ದಾಖಲೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.