ವಿಶಾಖಪಟ್ಟಣ: ದಕ್ಷಿಣ ಆಫ್ರಿಕಾ ಹಾಗೂ ಭಾರತ ಕ್ರಿಕೆಟ್ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೂರು ಹಾಗೂ ಅಂತಿಮ ಪಂದ್ಯ ಇಂದು (ಶನಿವಾರ) ನಡೆಯಲಿದೆ. ಸರಣಿಯಲ್ಲಿ ತಲಾ ಒಂದೊಂದು ಪಂದ್ಯ ಗೆದ್ದಿರುವ ಉಭಯ ತಂಡಗಳು ಟ್ರೋಫಿಗಾಗಿ ಇಂದು ಸೆಣೆಸಾಟ ನಡೆಸಲಿವೆ. ಇನ್ನು ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿದೆ.

ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಅವರು ಏಕದಿನ ಮಾದರಿಯಲ್ಲಿ ಮಾತ್ರ ಟೀಂ ಇಂಡಿಯಾ ಪರ ಆಡುತ್ತಿದ್ದಾರೆ. ಆದರೂ, ಅವರು ಇತ್ತೀಚೆಗೆ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ 1 ಅರ್ಧಶತಕ ಹಾಗೂ 2 ಸತತ ಶತಕ ಸಿಡಿಸಿ ಮಿಂಚಿದ್ದಾರೆ.
.IND vs SA Final | ವಿರಾಟ್ ಕೊಹ್ಲಿ ಶತಕ: ಕ್ಷಣಮಾತ್ರದಲ್ಲಿ ಭರ್ತಿಯಾದ ಇಡೀ ಮೈದಾನ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳ ಪೈಕಿ ರಾಂಚಿಯಲ್ಲಿ 135 ಮತ್ತು ರಾಯಪುರದಲ್ಲಿ 102 ರನ್ ಕಲೆ ಹಾಕಿದ್ದಾರೆ.
.Video| ವಿಶ್ವದಾಖಲೆಯ ಶತಕ ಸಿಡಿಸಿದ ಕೊಹ್ಲಿ: ಓಡೋಡಿ ಬಂದು ಕಾಲಿಗೆ ಬಿದ್ದ ಅಭಿಮಾನಿ.
ವಿಶಾಖಪಟ್ಟಣದಲ್ಲಿ ಕಿಂಗ್ ಕೊಹ್ಲಿ ದಾಖಲೆ

ವಿಶಾಖಪಟ್ಟಣ ಮೈದಾನದಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಆಡಿರುವ 7 ಏಕದಿನ ಪಂದ್ಯಗಳಲ್ಲಿ 97.83 ಸರಾಸರಿಯಲ್ಲಿ 587 ರನ್ ಗಳಿಸಿದ್ದಾರೆ. ಈ ವೇಳೆ ಅವರು 3 ಶತಕ, 2 ಅರ್ಧಶತಕಗಳು ಮತ್ತೊಂದು ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಈ ಅಂಕಿ ಅಂಶ ಗಮನಿಸಿದರೆ ವಿರಾಟ್ ಕೊಹ್ಲಿಯವರಿಗೆ ವಿಶಾಖಪಟ್ಟಣ ಮೈದಾನ ನೆಚ್ಚಿನದ್ದಾಗಿದ್ದು, ಇಂದು ಕೂಡ ಶತಕ ಬರುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.