ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕರ ಉಡುಪಿನಲ್ಲಿ ಬಾಲಕಿಯರು!

ಕಾಮುಕರಿಂದ ರಕ್ಷಣೆಗೆ ಹೊಸ ತಂತ್ರದ ಮೊರೆ
Last Updated 23 ಮಾರ್ಚ್ 2019, 20:23 IST
ಅಕ್ಷರ ಗಾತ್ರ

ಕೊಲ್ಲಂ:ದಕ್ಷಿಣ ಕೇರಳದ ಕೊಲ್ಲಂ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ನೀವು ಹೋದರೆ, ಕೊರವ ಕುಟುಂಬಕ್ಕೆ ಸೇರಿದ ಹತ್ತು ವರ್ಷದ ಮಕ್ಕಳು ಆಡುತ್ತಿರುವುದು ನಿಮ್ಮ ಕಣ್ಣಿಗೆ ಬೀಳುತ್ತದೆ. ಪ್ಯಾಂಟು, ಜೀನ್ಸ್‌ ಪ್ಯಾಂಟು, ಶರ್ಟ್‌, ಚಡ್ಡಿಯನ್ನು ತೊಟ್ಟಿರುತ್ತಾರೆ. ಅವರ ಬಟ್ಟೆ, ಕೇಶವಿನ್ಯಾಸ ನೋಡಿ ನೀವು ಈ ಮಕ್ಕಳನ್ನು ಬಾಲಕರು ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಅವರು ಬಾಲಕಿಯರು.

ಹುಡುಗಿಯರ ರಕ್ಷಣೆಯ ಉದ್ದೇಶದಿಂದ ಅವರಿಗೆ ಬಾಲಕರ ವೇಷ ಹಾಕಿದ್ದಾರೆ ಅವರ ಪೋಷಕರು. ರಾಜಸ್ಥಾನದಿಂದ ಇಲ್ಲಿನ ಒಚಿರಾಗೆ ವಲಸೆ ಬಂದಿರುವ ಕೊರವ ಕುಟುಂಬದ ಹೆಣ್ಣುಮಕ್ಕಳು ಬಾಲಕರ ವೇಷದಲ್ಲಿ ತಿರುಗಾಡುತ್ತಿದ್ದಾರೆ.

ಯುವಕನೊಬ್ಬ ಈ ಕುಟುಂಬದ ಸದಸ್ಯರ ಮೇಲೆ ದಾಳಿ ನಡೆಸಿ,15 ವರ್ಷದ ಬಾಲಕಿಯನ್ನು ಅಪಹರಿಸಿದ್ದರಿಂದ ಈ ಕುಟುಂಬ ಇತ್ತೀಚೆಗೆ ಸುದ್ದಿಯಲ್ಲಿತ್ತು. ಆ ಯುವಕ ಸ್ಥಳೀಯ ಸಿಪಿಎಂ ನಾಯಕನ ಮಗನಾಗಿದ್ದರಿಂದ ಈ ಘಟನೆ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಗಲಾಟೆ ಮಾಡಿದ್ದವು. ಪ್ರತಿಭಟನೆಯನ್ನೂ ನಡೆಸಿದ್ದವು.

ಆದರೆ, ಯುವಕ ಮತ್ತು ಆ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವದಂತಿಯೂ ಹಬ್ಬಿತ್ತು.

ಬಾಲಕಿ ಮತ್ತು ಯುವಕನನ್ನು ಪೊಲೀಸರು ಇನ್ನೂ ಪತ್ತೆಹಚ್ಚಿಲ್ಲ. ಇವರಿಗಾಗಿ ಕರ್ನಾಟಕ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಿಸಿರುವ ಗೊಂಬೆಗಳನ್ನು ಮಾರಾಟ ಮಾಡುವ ಈ ಕುಟುಂಬದಲ್ಲಿ ಪತಿ, ಪತ್ನಿ ಮತ್ತು ಏಳು ಮಕ್ಕಳು ಇವೆ. ಈ ಪೈಕಿ ಐವರು 5ರಿಂದ 15ವರ್ಷದ ಹೆಣ್ಣುಮಕ್ಕಳಿದ್ದಾರೆ. ಮೂರು ವರ್ಷಗಳಿಂದ ಈ ಕುಟುಂಬ ಒಚಿರಾದಲ್ಲಿ ವಾಸವಿದೆ.

‘ಯುವಕರಿಂದ ಮಕ್ಕಳನ್ನು ರಕ್ಷಿಸಲು ಹೀಗೆ ಬಾಲಕರ ಉಡುಪನ್ನು ಹಾಕಲಾಗಿದೆ. ರಸ್ತೆ ಬದಿ ಗೊಂಬೆಗಳನ್ನು ಮಾರಾಟ ಮಾಡುವಾಗ ಈ ಮಕ್ಕಳು ಅಪ್ಪನಿಗೆ ನೆರವು ನೀಡುತ್ತವೆ’ ಎಂದು ಸರ್ಕಾರಿ ನೌಕರರೊಬ್ಬರು ಹೇಳಿದ್ದಾರೆ.

ಯುವಕರು ಚುಡಾಯಿಸುವುದರಿಂದ ತಪ್ಪಿಸಿಕೊಳ್ಳಲು ಮಕ್ಕಳಿಗೆ ಬಾಲಕರ ಉಡುಪು ಹಾಕಿಸುವಂತೆ ಸ್ಥಳೀಯ ಪೊಲೀಸರೇ ಸಲಹೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT