ಶ್ಯೋಪುರ/ಮಧ್ಯಪ್ರದೇಶ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಿಂದ ತಪ್ಪಿಸಿಕೊಂಡಿದ್ದ ಜ್ವಾಲಾ ಎಂಬ ಹೆಣ್ಣು ಚೀತಾವನ್ನು ರಾಜಸ್ಥಾನದಲ್ಲಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಜ್ವಾಲಾ, ಅಂತರರಾಜ್ಯ ಗಡಿಯನ್ನು ಸೋಮವಾರ ದಾಟಿತ್ತು. ಪ್ರಾಣಿ ಮತ್ತು ಜನರ ರಕ್ಷಣೆಯ ಸಲುವಾಗಿ ಚೀತಾವನ್ನು ರಕ್ಷಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಚೀತಾ ಯೋಜನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಕರೀರಾ ಕಲಾನ್ ಗ್ರಾಮದಲ್ಲಿ ಚೀತಾವನ್ನು ಆಗಸ್ಟ್ 12ರಂದು ರಕ್ಷಿಸಲಾಗಿದೆ. ಅಪಾರ ಜನರು ಸೇರಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಿನಿಂದ ಕೂಡಿತ್ತು. ಕಾರ್ಯಾಚರಣೆಯ ಬಳಿಕ ಜ್ವಾಲಾವನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.