ನವದೆಹಲಿ: ‘ಲಾ–ನಿನಾ’ ಸೆಪ್ಟೆಂಬರ್ನಿಂದ ಮತ್ತೆ ಬರುವ ಸಾಧ್ಯತೆ ಇದ್ದು, ಹವಾಮಾನದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) ಹೇಳಿದೆ.

ಲಾ–ನಿನಾ ವಾತಾವರಣವನ್ನು ತಂಪಾಗಿಸುತ್ತದೆಯಾದರೂ, ವಿಶ್ವದ ಹೆಚ್ಚಿನ ಭಾಗಗಳಲ್ಲಿ ತಾಪಮಾನವು ಸರಾಸರಿಗಿಂತ ಹೆಚ್ಚಾಗಿರುತ್ತದೆ ಎಂದು ಅದು ತಿಳಿಸಿದೆ.

‘ಲಾ–ನಿನಾ’ ಮತ್ತು ‘ಎಲ್–ನಿನೊ’ ಪೆಸಿಫಿಕ್ ಸಾಗರದ ಹವಾಮಾನ ಚಕ್ರದ ಎರಡು ಹಂತಗಳಾಗಿವೆ. ‘ಎಲ್–ನಿನೊ’ ಪೆರುವಿನ ಸಮುದ್ರದ ನೀರನ್ನು ಬಿಸಿ ಮಾಡಿ ಭಾರತದ ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಚಳಿಗಾಲದಲ್ಲಿ ತಾಪಮಾನ ಹೆಚ್ಚಿರುವಂತೆ ಮಾಡುತ್ತದೆ. ‘ಲಾ–ನಿನಾ’ ಆ ನೀರನ್ನು ತಂಪಾಗಿಸಿ, ಮಳೆಗಾಲ ಮತ್ತು ಚಳಿಗಾಲವನ್ನು ತೀವ್ರಗೊಳಿಸುತ್ತದೆ.

ಮನುಷ್ಯರ ಹಸ್ತಕ್ಷೇಪದಿಂದಾಗಿ ‘ಲಾ–ನಿನಾ’ ಮತ್ತು ‘ಎಲ್–ನಿನೊ’ ಬದಲಾಗುತ್ತಿದ್ದು, ಇದರಿಂದಾಗಿ ಜಗತ್ತಿನ ತಾಪಮಾನ ಏರುತ್ತಿದೆ, ಮಳೆ ಮತ್ತು ತಾಪಮಾನದ ಸ್ವರೂಪವೂ ಬದಲಾಗುತ್ತಿವೆ ಎಂದು ಡಬ್ಲ್ಯೂಎಂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.