ನವದೆಹಲಿ: ದೆಹಲಿ ಸರ್ಕಾರವು ಆರಂಭಿಸಿದ್ದ ‘ಲಾಡ್ಲಿ ಯೋಜನೆ’ ಅಡಿಯಲ್ಲಿ ಫಲಾನುಭವಿಗಳ ಸಂಖ್ಯೆಯು ಕಳೆದ 15 ವರ್ಷಗಳಲ್ಲಿ ಶೇಕಡಾ 60ರಷ್ಟು ಕುಸಿತ ದಾಖಲಿಸಿರುವುದು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಪಡೆದ ದಾಖಲೆಗಳಿಂದ ಬಹಿರಂಗಗೊಂಡಿದೆ.

ಯುವತಿಯರ ಸಬಲೀಕರಣ ಹಾಗೂ ಲಿಂಗ ಸಮಾನತೆ ಜಾರಿಗೆ ತರುವ ನಿಟ್ಟಿನಲ್ಲಿ 2008ರ ಜ.1ರಂದು ರಾಷ್ಟ್ರ ರಾಜಧಾನಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಯೋಜನೆ ಆರಂಭಗೊಂಡು, 15 ವರ್ಷದಲ್ಲಿ ಫಲಾನುಭವಿಗಳ ಸಂಖ್ಯೆಯು ಶೇಕಡಾ 60 ರಷ್ಟು ಕುಸಿತ ಕಂಡಿದೆ ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯೇ ಆರ್ಟಿಐನಡಿ ಒಪ್ಪಿಕೊಂಡಿದೆ.

ಯೋಜನೆ ಆರಂಭಗೊಂಡ 2008–09ರ ಅವಧಿಯಲ್ಲಿ ಗರಿಷ್ಠ ನೋಂದಣಿಯಾಗಿದ್ದರೆ, 2019–20ರಲ್ಲಿ ಕನಿಷ್ಠ ನೋಂದಣಿ ಮಾಡಿಕೊಂಡಿರುವುದು ಕಂಡುಬಂದಿದೆ.

ಬಾಲಕಿಯರು ಶಾಲೆ ತೊರೆಯುತ್ತ ಇರುವುದು ಹಾಗೂ ಜಾಗೃತಿಯ ಕೊರತೆಯಿಂದ ನೋಂದಣಿಯನ್ನು ನವೀಕರಿಸದ ಕಾರಣ ಫಲಾನುಭವಿಗಳ ಸಂಖ್ಯೆಯಲ್ಲಿ ಕುಸಿತವಾಗಿದೆ
ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.