ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಘಿ ಪೂರ್ಣಿಮ: ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಮಿಂದೆದ್ದ 20 ಲಕ್ಷ ಭಕ್ತರು

Last Updated 5 ಫೆಬ್ರುವರಿ 2023, 13:34 IST
ಅಕ್ಷರ ಗಾತ್ರ

ಪ್ರಯಾಗರಾಜ್‌: ‘ಮಾಘಿ ಪೂರ್ಣಿಮದ’ ಹಿನ್ನೆಲೆಯಲ್ಲಿ ಸುಮಾರು 20 ಲಕ್ಷ ಜನರು ಭಾನುವಾರ ಸಂಗಮದಲ್ಲಿ ಮಿಂದೆದ್ದರು ಎಂದು ಅಧಿಕಾರಿಗಳು ತಿಳಿಸಿದರು.

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಒಂದೆಡೆ ಸೇರುವ ಪವಿತ್ರ ಸ್ಥಳವೇ ಸಂಗಮ.

‘ಭದ್ರತೆ ದೃಷ್ಟಿಯಿಂದ 5000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನದಿ ಆಂಬುಲೆನ್ಸ್‌ ಮತ್ತು ತೇಲುವ ಪೊಲೀಸ್‌ ಉಪಠಾಣೆ ವ್ಯವಸ್ಥೆ ಕಲ್ಪಿಸಲಾಗಿತ್ತು’ ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ (ಮಾಘ ಮೇಳ) ರಾಜೀವ್‌ ನಾರಾಯಣ್‌ ಮಿಶ್ರಾ ತಿಳಿಸಿದರು.

ಫೆ.18ರಂದು ಮಹಾಶಿವರಾತ್ರಿಯ ದಿನ ಮುಂದಿನ ‘ಪವಿತ್ರ ಸ್ನಾನ’ ನಡೆಯಲಿದೆ. ಅಂದು ಮಾಘ ಮೇಳ ಸಮಾರೋಪಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT