ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆ ಮೋದಿ ಟ್ರಸ್ಟ್‌ಗೆ ಮಗನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದ ಲಲಿತ್ ಮೋದಿ

Last Updated 15 ಜನವರಿ 2023, 13:17 IST
ಅಕ್ಷರ ಗಾತ್ರ

ನವದೆಹಲಿ: ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಸದ್ಯ ಭಾರತದಿಂದ ಪರಾರಿಯಾಗಿ ಲಂಡನ್‌ನಲ್ಲಿ ನೆಲೆಸಿದ್ದಾರೆ. ತಾವು ಕೋವಿಡ್ ಮತ್ತು ನ್ಯುಮೋನಿಯಾಗೆ ತುತ್ತಾಗಿರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ 24/7 ಕೃತಕ ಆಮ್ಲಜನಕ ವ್ಯವಸ್ಥೆಯಲ್ಲಿ ಉಸಿರಾಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಕೆಕೆ ಮೋದಿ ಟ್ರಸ್ಟ್‌ಗೆ ತಮ್ಮ ಕುಟುಂಬದಿಂದ ಮುಂದಿನ ಉತ್ತರಾಧಿಕಾರಿಯಾಗಿ ತಮ್ಮ ಪುತ್ರ ರುಚಿರ್‌ ಮೋದಿಯನ್ನು ಅಧಿಕೃತವಾಗಿ ಅವರು ಘೋಷಿಸಿದ್ದಾರೆ. ಇನ್ನೂ ಮುಂದೆ ಕುಟುಂಬ ಹಾಗೂ ಕೆಕೆಎಂಟಿಎಫ್ ಸಂಸ್ಥೆಯ ವ್ಯವಹಾರಗಳನ್ನು ರುಚಿರ್‌ ನೋಡಿಕೊಳ್ಳುತ್ತಾರೆ. ಈ ನಿರ್ಧಾರದ ಬಗ್ಗೆ ಮಗಳು ಅಲಿಯಾ ಜೊತೆ ಚರ್ಚೆಸಿದ್ದೇನೆ. ಭವಿಷ್ಯದಲ್ಲಿ ಕೆಕೆಎಂಟಿಎಫ್ ಸಂಸ್ಥೆಯ ಅಧಿಕಾರ ಮತ್ತು ಲಾಭಗಳಲ್ಲಿ ನನಗೆ ಯಾವುದೇ ಪಾಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಆಸ್ತಿ ವಿಚಾರದಲ್ಲಿ ತಾಯಿ ಹಾಗೂ ಸಹೋದರಿಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದು, ಆ ಪ್ರಕರಣದ ಎಲ್ಲಾ ನಿರ್ಧಾರವನ್ನು ರುಚಿರ್‌ ತೆಗೆದುಕೊಳ್ಳುತ್ತಾರೆ. ‘ನನ್ನ ಜೀವನ ಉದ್ದಕ್ಕೂ ನಡೆಸಿದ ಹೋರಾಟ ಸಾಕು. ಈಗ ನಾನು ನಿವೃತ್ತಿ ತೆಗೆದುಕೊಳ್ಳುವ ಸಮಯ. ಮಕ್ಕಳು ಪ್ರಜ್ವಲಿಸಲಿ. ನಾನು ಎಲ್ಲರನ್ನೂ ನೋಡಿಕೊಳ್ಳುತ್ತೇನೆ’ ಎಂದು ಲಲಿತ್‌ ಮೋದಿ ಹೇಳಿದ್ದಾರೆ.

ಚುಟುಕು ಕ್ರಿಕೆಟ್‌ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಮೋದಿ ಈ ಹಿಂದೆ ಪ್ರವರ್ತಕರಾಗಿದ್ದರು. ಕ್ರಿಕೆಟ್ ಲೀಗ್, ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಗಳ ಹಿನ್ನೆಲೆಯಲ್ಲಿ 2010 ರಲ್ಲಿ ಅವರು ದೇಶ ತೊರೆದು ಲಂಡನ್‌ನಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT