ತಿರುವನಂತಪುರ: ಕೇರಳದಲ್ಲಿ ಆಡಳಿತರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಚುನಾವಣೆಯಲ್ಲಿ ‘ಸ್ನೇಹಪರ ಪಂದ್ಯ’ ಆಡುತ್ತಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ದೂರಿದರು.

ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಅವರು, ‘ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಂಥೀಯರು ಪರಸ್ಪರ ಹೋರಾಡುತ್ತಿದ್ದರೆ, 2000 ಕಿ.ಮೀ ದೂರದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಅವರು ಮಿತ್ರ ಪಕ್ಷಗಳಾಗಿವೆ’ ಎಂದು ಟೀಕಿಸಿದರು.

ಚುನಾವಣೆಯಲ್ಲಿ ಒಂದು ವೇಳೆ ಎಲ್‌ಡಿಎಫ್ ಅಥವಾ ಯುಡಿಎಫ್ ಗೆದ್ದರೆ, ಅದು ಕೇರಳದ ಜನರ ಸೋಲಾಗುತ್ತದೆ ಎಂದು ಅವರು ತಿಳಿಸಿದರು.

‘ಎಲ್‌ಡಿಎಫ್-ಯುಡಿಎಫ್ ಸಮಯ ಮುಗಿದಿದೆ. ಎರಡೂ ರಾಜಕೀಯ ಮೈತ್ರಿ ಕೂಟಗಳು ಕೇರಳದ ಜನರ ಹೊಸ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡಿಲ್ಲ. ಜನರು ಬದಲಾವಣೆ ಬಯಸುತ್ತಿದ್ದಾರೆ’ ಎಂದ ರಾಜನಾಥ ಸಿಂಗ್, ಎರಡು ಮೈತ್ರಿ ಕೂಟಗಳು ಜನರಿಗೆ ‘ಸುಳ್ಳು ಭರವಸೆಗಳನ್ನು’ ನೀಡುತ್ತಿವೆ ಎಂದು ಆರೋಪಿಸಿದರು.

‘ಎಲ್‌ಡಿಎಫ್ ಜನರಿಗೆ ಭರವಸೆಗಳನ್ನು ನೀಡುವ ಬದಲು ಕ್ರಮ ಕೈಗೊಂಡ ವರದಿಯೊಂದಿಗೆ ಬರಬೇಕು’ ಎಂದ ಅವರು, ಎರಡೂ ಮೈತ್ರಿಗಳ ತುಷ್ಟೀಕರಣ ನೀತಿಗಳು ಕೇರಳವನ್ನು ಅಭಿವೃದ್ಧಿಯ ಹಾದಿಯಿಂದ ದೂರವಿಟ್ಟಿವೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.