ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ನಿಲ್ಲಿಸಿದ್ದ ಹೊಣೆಯನ್ನು ಹೊತ್ತುಕೊಂಡು ‘ಜೈಷ್ ಉಲ್’ ಹಿಂದ್’ ಹೆಸರಿನಲ್ಲಿ ಬರೆದಿದ್ದ ಪತ್ರ ನಕಲಿ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಟೆಲಿಗ್ರಾಂ ಆ್ಯಪ್ ಮೂಲಕ ಈ ಸಂಘಟನೆ ಹೆಸರಿನಲ್ಲಿ ಪತ್ರ ಕಳುಹಿಸಲಾಗಿತ್ತು. ಕ್ರಿಪ್ಟೊ ಕರೆನ್ಸಿ ಮೂಲಕ ಹಣ ಪಾವತಿಸುವಂತೆ ಸೂಚಿಸಿ ವೆಬ್‌ಪೇಜ್‌ನ ಲಿಂಕ್ ನೀಡಲಾಗಿತ್ತು.

ಅದೇ ದಿನ ಸಂಜೆ, ನಿಜವಾದ ‘ಜೈಷ್ ಉಲ್ ಹಿಂದ್’ ಸಂಘಟನೆ ತಮ್ಮದು ಎಂದು ಹೇಳಿಕೊಂಡು ಪತ್ರವೊಂದನ್ನು ಪೋಸ್ಟ್ ಮಾಡಲಾಗಿದೆ. ಅಂಬಾನಿ ಮನೆ ಬಳಿಕ ಪತ್ತೆಯಾದ ಕಾರಿಗೂ ಸಂಘಟನೆಗೂ ಯಾವುದೇ ರೀತಿ ಸಂಬಂಧವಿಲ್ಲ ಮತ್ತು ಹಣ ಪಾವತಿಯ ಬಗ್ಗೆ ಯಾವುದೇ ಸಂದೇಶ ಪೋಸ್ಟ್ ಮಾಡಿಲ್ಲ ಎಂದು ತಿಳಿಸಿದೆ.

ಈ ಬಗ್ಗೆ ತನಿಖೆ ನಡೆಸಿದ ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು, ಮೊದಲನೇ ಪತ್ರದಲ್ಲಿ ನಮೂದಿಸಲಾಗಿದ್ದ ಲಿಂಕ್‌ನಿಂದ ಯಾವುದೇ ವೆಬ್‌ಪೇಜ್ ಪತ್ತೆಯಾಗಲಿಲ್ಲ. ಹೀಗಾಗಿ, ಮೊದಲ ಪತ್ರ ನಕಲಿಯಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜೆಲೆಟಿನ್ ಕಡ್ಡಿಗಳಿದ್ದ ವಾಹನವೊಂದು ಅಂಬಾನಿ ಮನೆ ಬಳಿ ಗುರುವಾರ ಪತ್ತೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.