ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಅಪಘಾತ ಸಂಭವಿಸಿದೆ.
(ಚಿತ್ರ ಕೃಪೆ: X/@IndiaCoastGuard)
ಲೈಬೀರಿಯಾ ಹಡಗು 650 ತೈಲ ತುಂಬಿದ ಕಂಟೇನರ್‌ಗಳನ್ನು ಹೊಂದಿತ್ತು.
(ಚಿತ್ರ ಕೃಪೆ: X/@IndiaCoastGuard)
ಹಡಗಿನಲ್ಲಿದ್ದ ಫಿಲಿಫೈನ್ಸ್‌ನ 20, ಉಕ್ರೇನ್‌ನ ಇಬ್ಬರು ಮತ್ತು ರಷ್ಯಾ ಹಾಗೂ ಜಾರ್ಜಿಯಾದ ತಲಾ ಒಬ್ಬರು ಸೇರಿದಂತೆ 24 ಸಿಬ್ಬಂದಿ ಇದ್ದರು.
(ಚಿತ್ರ ಕೃಪೆ: X/@IndiaCoastGuard)
'ಅಪಾಯಕಾರಿ ವಸ್ತು' ಹೊಂದಿರುವ ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿದ್ದು, ಅವು ದಡಕ್ಕೆ ಸೇರಬಹುದು ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎಂ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
(ಚಿತ್ರ ಕೃಪೆ: X/@IndiaCoastGuard)
ಸಮುದ್ರದಲ್ಲಿ ಕಂಟೇನರ್ ಅಥವಾ ತೈಲ ಸೋರಿಕೆ ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
(ಚಿತ್ರ ಕೃಪೆ: X/@IndiaCoastGuard)
ನೆರವಿಗಾಗಿ ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಜಾತಾ ಹಡಗು ಕಾರ್ಯಾಚರಣೆಗಿಳಿದಿತ್ತು.
(ಚಿತ್ರ ಕೃಪೆ: X/@IndiaCoastGuard)
ಕೇರಳದಲ್ಲಿ ಲೈಬೀರಿಯಾ ಹಡಗು ಮುಳುಗಡೆ, ಕಂಟೇನರ್ ಸಮುದ್ರಪಾಲು