ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ದೀಪಗಳನ್ನು ಅಳವಡಿಸಲು ಒಪ್ಪಂದ ನೀಡಿದ್ದ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣ ಆಟೊಮೊಬೈಲ್ಸ್ ಸಂಸ್ಥೆಯ ಸದಸ್ಯರ ದೂರಿನಡಿ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಮಪಥ ಮಾರ್ಗದಲ್ಲಿ 6,400 ವಿವಿಧ ಪ್ರಕಾರದ ದೀಪಗಳು ಹಾಗೂ 96 ಪ್ರೊಜೆಕ್ಟರ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಮಾರ್ಚ್ 19ರವರೆಗೆ ಎಲ್ಲಾ ದೀಪಗಳು ಇದ್ದವು. ಆದರೆ ಮೇ 9ರಂದು ಪರಿಶೀಲನೆಗೆ ಸಂಸ್ಥೆ ತೆರಳಿದಾಗ ಕಾಣೆಯಾಗಿರುವುದು ತಿಳಿದು ಬಂದಿದೆ ಎಂದು ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.