ಅಗರ್ತಲಾ (ತ್ರಿಪುರ): ಅಗರ್ತಲಾ ರೈಲು ನಿಲ್ದಾಣದಲ್ಲಿ 13 ಪುರುಷರು ಮತ್ತು 3 ಮಹಿಳೆಯರು ಸೇರಿದಂತೆ 16 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಬಂಧಿತರ ಪೈಕಿ ಮೂವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಘಟನೆ ಸಂಬಂಧ ಅಗರ್ತಲಾ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ (ಜಿಆರ್‌ಪಿಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ಮಿಜನೂರ್ ರೆಹಮಾನ್ (26), ಸಫಿಕುಲ್ ಇಸ್ಲಾಂ (30), ಎಂ.ಡಿ. ಅಲಮಿನ್ ಅಲಿ (23), ಎಂ.ಡಿ. ಮಿಲನ್ (38), ಸಹಾಬುಲ್ (30) ಸರಿಫುಲ್ ಶೇಕ್ (30), ಕಬೀರ್ ಶೇಕ್ (34), ಲಿಜಾ ಖಾತುನ್ (26), ತಾನಿಯಾ ಖಾನ್ (24), ಎಥಿ ಶೇಕ್ (39), ಬೃಂದಾಬನ್ ಮಂಡಲ್ (21), ಅಬ್ದುಲ್ ಹಕೀಮ್ (25), ಎಂ.ಡಿ. ಇದುಲ್ (27), ಎಂ.ಡಿ. ಅಬ್ದುರ್ ರೆಹಮಾನ್ (20), ಎಂ.ಡಿ. ಅಯೂಬ್ ಅಲಿ ( 30) ಮತ್ತು ಎಂ.ಡಿ. ಜಿಯಾರುಲ್ (20) ಎಂದು ಗುರುತಿಸಲಾಗಿದೆ.
ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.