ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪದಚ್ಯುತಿಗೆ ವಿರೋಧ ಪಕ್ಷಗಳು ಮಂಗಳವಾರ ನೋಟಿಸ್ ನೀಡಿವೆ. ಭಾರತದ ಸಂವಿಧಾನದ 94ಸಿ ವಿಧಿಯಡಿ ಲೋಕಸಭಾ ಕಾರ್ಯದರ್ಶಿಯವರಿಗೆ ನೋಟಿಸ್ ಸಲ್ಲಿಕೆ ಮಾಡಲಾಗಿದೆ.
.ಸ್ಪೀಕರ್ ಓಂ ಬಿರ್ಲಾ ಪದಚ್ಯುತಿಗೆ ವಿರೋಧ ಪಕ್ಷಗಳು ನೀಡಿದ ನೋಟಿಸ್ನಲ್ಲಿ ಏನಿದೆ?.
ಭಾರತದ ಸಂವಿಧಾನದ 94ನೇ ವಿಧಿಯಡಿ ಸ್ಪೀಕರ್ ಅವರನ್ನು ಪದಚ್ಯುತಗೊಳಿಸಬಹುದು. ಪದಚ್ಯುತಗೊಳಿಸುವ ನಿರ್ಣಯಕ್ಕೆ ಸದನ ಬಹುಮತದಿಂದ ಒಪ್ಪಿಗೆ ಬೇಕು. ಈ ಬಹುಮತವು ಪ್ರಕ್ರಿಯೆ ವೇಳೆ ಹಾಜರಿದ್ದ ಸದಸ್ಯರ ಅಲ್ಲ, ಸದನದ ಒಟ್ಟು ಬಲದ (543) ಪೈಕಿ ಬಹುಮತದ ನಿರ್ಧಾರ ಬೇಕು. ಅಂದರೆ ಸ್ಪೀಕರ್ ಅವರನ್ನು ಪದಚ್ಯುತಗೊಳಿಸಲು 272 ಮತಗಳು ಬೇಕು. ಖಾಲಿ ಇರುವ ಸ್ಥಾನ, ಅನುಪಸ್ಥಿತಿ ಇರುವ ಸದಸ್ಯರ ಲೆಕ್ಕ ಇಲ್ಲಿ ನಗಣ್ಯ. ಇದು ಲೋಕಸಭಾ ಸ್ಪೀಕರ್ ಹುದ್ದೆಯ ಗೌರವವನ್ನು ಸೂಚಿಸುತ್ತದೆ.
.ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಪದಚ್ಯುತಿಗೆ ವಿರೋಧ ಪಕ್ಷಗಳಿಂದ ನೋಟಿಸ್ ಸಲ್ಲಿಕೆ.
ಸ್ಪೀಕರ್ ಪದಚ್ಯುತಗೊಳಿಸುವ ಪ್ರಕ್ರಿಯೆ ಹೇಗೆ?

ಸ್ಪೀಕರ್ ಅವರನ್ನು ಹುದ್ದೆಯಿಂದ ಪದಚ್ಯುತಗೊಳಿಸಬೇಕಾದರೆ ಕನಿಷ್ಠ 14 ದಿನಗಳ ನೋಟಿಸ್ ನೀಡಬೇಕು. ನೋಟಿಸ್ನಲ್ಲಿ ಕನಿಷ್ಠ 50 ಸಂಸದರ ಸಹಿ ಇರಬೇಕು. 50 ಸಂಸದರ ಸಹಿ ಇಲ್ಲದಿದ್ದರೆ ನೋಟಿಸ್ ಅಮಾನ್ಯ.

ನೋಟಿಸ್ ಅವಧಿ ಬಳಿಕ ಅದನ್ನು ಪರಿಗಣಿಸಲಾಗುತ್ತದೆ. ಅದನ್ನು ಚರ್ಚೆಗೆ ನಿಗದಿಪಡಿಸಲಾಗುತ್ತದೆ. ಚರ್ಚೆಯ ವೇಳೆ ಸಭೆಯ ನೇತೃತ್ವವನ್ನು ಸ್ಪೀಕರ್ ವಹಿಸುವಂತಿಲ್ಲ. ಉಪ ಸ್ಪೀಕರ್ ಸಭೆಯ ನೇತೃತ್ವ ವಹಿಸಬೇಕು. ಉಪ ಸ್ಪೀಕರ್ ಇಲ್ಲದಿದ್ದರೆ ರಾಷ್ಟ್ರಪತಿ ನೇಮಿಸಿದ ಸದಸ್ಯರೊಬ್ಬರು ಸ್ಪೀಕರ್ ಪೀಠದಲ್ಲಿ ಕುಳಿತುಕೊಳ್ಳಬೇಕು. ಅವರು ಈ ಪ್ರಕ್ರಿಯೆ ನಡೆಸಿ. ಗೊತ್ತುವಳಿಯನ್ನು ಮತಕ್ಕೆ ಹಾಕುತ್ತಾರೆ.
.ನಿಮ್ಮ ಮೇಲೆ ಒತ್ತಡವಿದೆ: ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದ ‘ಕೈ’ ಸಂಸದೆಯರು.
ಒಂದು ವೇಳೆ ಗೊತ್ತುವಳಿಗೆ ಸಭೆ ಅಂಗೀಕಾರ ನೀಡಿದರೆ, ಕೂಡಲೇ ಸ್ಪೀಕರ್ ಆ ಸ್ಥಾನದಿಂದ ಪದಚ್ಯುತಗೊಳ್ಳುತ್ತಾರೆ. ಆ ಸ್ಥಾನ ಖಾಲಿಯಾಗಲಿದೆ. ಹೊಸ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಂದು ವೇಳೆ ಗೊತ್ತುವಳಿಗೆ ಸೋಲಾದರೆ ಸ್ಪೀಕರ್ ಹುದ್ದೆಯಲ್ಲಿ ಮುಂದುವರಿಯುತ್ತಾರೆ.

ಭಾರತದ ಸಂಸದೀಯ ಇತಿಹಾಸದಲ್ಲಿ ಇದುವರೆಗೂ ಯಾವುದೇ ಸ್ಪೀಕರ್ ಅನ್ನು ಪದಚ್ಯುತಗೊಳಿಸಿಲ್ಲ. ಆದರೆ ಈ ಹಿಂದೆ ಮೂರು ಬಾರಿ ಪದಚ್ಯುತಿಗೊಳಿಸಲು ನೋಟಿಸ್ ಸಲ್ಲಿಕೆಯಾಗಿವೆ.

1954ರಲ್ಲಿ ಜಿ.ವಿ ಮವಳಂಕರ್ ಹಾಗೂ 1987ರಲ್ಲಿ ಬಲರಾಮ್ ಜಾಖರ್ ಅವರನ್ನು ಸ್ಪೀಕರ್ ಹುದ್ದೆಯಿಂದ ಪದಚ್ಯುತಗೊಳಿಸಬೇಕು ಎಂದು ನೋಟಿಸ್ ನೀಡಲಾಗಿತ್ತು. ಆದರೆ ಅದಕ್ಕೆ ಸೋಲಾಗಿತ್ತು. 1966ರಲ್ಲಿ ಹುಕ್ಕಂ ಸಿಂಗ್ ಅವರ ವಿರುದ್ಧ ನೀಡಿದ್ದ ನೋಟಿಸ್ನಲ್ಲಿ ಕನಿಷ್ಠ 50 ಸಂಸದರ ಹೆಸರಿಲ್ಲದ ಕಾರಣ ಆ ನಿಲುವಳಿ ತಿರಸ್ಕೃತವಾಗಿತ್ತು.
.ಸಂಸದೀಯ ಸಮಿತಿಗಳ ಮಹತ್ವ ಹೆಚ್ಚುತ್ತಿದೆ: ಓಂ ಬಿರ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.