ನವದೆಹಲಿ: ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ಮಂಗಳವಾರ ನೋಟಿಸ್ ನೀಡಿವೆ.
.ಸ್ಪೀಕರ್ ಓಂ ಬಿರ್ಲಾ ಭೇಟಿ ಮಾಡಿದ ರಾಹುಲ್ ಗಾಂಧಿ.
ಓಂ ಬಿರ್ಲಾ ಪದಚ್ಯುತಗೊಳಿಸುವ ನೋಟಿಸ್ಗೆ 119 ಸಂಸದರು ಸಹಿ ಹಾಕಿದ್ದು, ಟಿಎಂಸಿ ಸಂಸದರು ಇದರಿಂದ ದೂರ ಉಳಿದಿದ್ದಾರೆ.

ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಬೆಂಬಲಿಸುವುದಾಗಿ ಟಿಎಂಸಿ ಮೂಲಗಳು ತಿಳಿಸಿವೆ.

ನಿಯಮಗಳ ಪ್ರಕಾರ ನೋಟಿಸ್ ಸಲ್ಲಿಸಿದ 14 ದಿನಗಳ ಬಳಿಕವಷ್ಟೇ ಚರ್ಚೆಗೆ ಬರಲಿದೆ. ನೋಟಿಸ್ ಪುರಸ್ಕೃತವಾದ ಬಳಿಕವಷ್ಟೇ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ.
.ಇಂತಹ ಸದನವನ್ನು ನಡೆಸಲು ಸಾಧ್ಯವಿಲ್ಲ: ಲೋಕಸಭೆಯಲ್ಲಿ ಓಂ ಬಿರ್ಲಾ ಅಸಮಾಧಾನ.
ಸಂವಿಧಾನದ 94ಸಿ ವಿಧಿಯಡಿ ನೋಟಿಸ್ ಸಲ್ಲಿಸಲಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೋಗೊಯ್ ತಿಳಿಸಿದ್ದಾರೆ.

ಸ್ಪೀಕರ್ ಅವರನ್ನು ಪದ್ಯಚುತಗೊಳಿಸಬೇಕು ಎಂದು ನೋಟಿಸ್ ಸಲ್ಲಿಕೆಯಾಗುತ್ತಿರುವುದು ಇದು ನಾಲ್ಕನೇ ಬಾರಿ.

ಈ ಹಿಂದೆ 1954ರಲ್ಲಿ ಜಿ.ವಿ ಮವಳಂಕರ್ ಹಾಗೂ 1987ರಲ್ಲಿ ಬಲರಾಮ್ ಜಾಖರ್ ಅವರನ್ನು ಸ್ಪೀಕರ್ ಹುದ್ದೆಯಿಂದ ಪದಚ್ಯುತಗೊಳಿಸಬೇಕು ಎಂದು ನೋಟಿಸ್ ನೀಡಲಾಗಿತ್ತು. ಆದರೆ ಅದಕ್ಕೆ ಸೋಲಾಗಿತ್ತು. 1966ರಲ್ಲಿ ಹುಕ್ಕಂ ಸಿಂಗ್ ಅವರ ವಿರುದ್ಧ ನೀಡಿದ್ದ ನೋಟಿಸ್ನಲ್ಲಿ ಕನಿಷ್ಠ 50 ಸಂಸದರ ಹೆಸರಿಲ್ಲದ ಕಾರಣ ಆ ನಿಲುವಳಿ ತಿರಸ್ಕೃತವಾಗಿತ್ತು.
.ಲೋಕಸಭಾ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾದ ವಿರೋಧ ಪಕ್ಷಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.