‘ಬಿಎಂಡಬ್ಲ್ಯು ಕಾರು ಖರೀದಿಗೆ ಟೆಂಡರ್ ಆಹ್ವಾನಿಸಿರುವ ಲೋಕಪಾಲ ಸಂಸ್ಥೆಯ ನಡೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶ್ನಿಸಬೇಕು’ ಎಂದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಒತ್ತಾಯಿಸಿದೆ.
‘ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮೇಲಿನ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸಲು ಸ್ಥಾಪಿಸಲಾದ ಸಂಸ್ಥೆ ಲೋಕಪಾಲ. ಇಂತಹ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು ತನ್ನ ಸದಸ್ಯರಿಗೆ ಐಷಾರಾಮಿಯಾದ 7 ಬಿಎಂಡಬ್ಲ್ಯು ಕಾರುಗಳನ್ನು ಬಯಸುತ್ತಿದೆ. ಇದು ಪ್ರಾಮಾಣಿಕ ತೆರಿಗೆದಾರರ ಹಣವನ್ನು ಲೂಟಿ ಮಾಡುವುದಾಗಿದೆ’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಆರೋಪಿಸಿದ್ದಾರೆ.