ಔರಂಗಾಬಾದ್ (ಮಹಾರಾಷ್ಟ್ರ): ಉಲ್ಕಾಪಾತದ ಪರಿಣಾಮ ಸುಮಾರು 50 ಸಾವಿರ ವರ್ಷಗಳ ಹಿಂದಿನದ್ದು ಎನ್ನಲಾದ ಮಹಾರಾಷ್ಟ್ರದ ಲೋನಾರ್ ಸರೋವರದ ನೀರು ಈಗ ಗುಲಾಬಿ ಬಣ್ಣಕ್ಕೆ ತಿರುಗಿದೆ.

ಇದನ್ನೂ ಓದಿ: ನಿಗೂಢ ಲೋನಾರ್ ಕುಳಿ

ನೀರಿನಲ್ಲಿ ಮೂಡಿರುವ ಪಾಚಿ ಈ ಪರಿವರ್ತನೆಗೆ ಕಾರಣ ಎಂಬುದು ಪರಿಣತರ ಅಭಿಪ್ರಾಯ. ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿರುವ ಈ ಸರೋವರ ಹೆಸರಾಂತ ಪ್ರವಾಸಿ ತಾಣ ಕೂಡ. ಇದೀಗ ವಿಶ್ವದ ವಿವಿಧ ರಾಷ್ಟ್ರಗಳ ವಿಜ್ಞಾನಿಗಳ ಗಮನ ಸೆಳೆಯುತ್ತಿದೆ.

ಸರೋವರದಲ್ಲಿ ಸುಮಾರು 1.2 ಕಿ.ಮೀ ವ್ಯಾಸದಲ್ಲಿ ನೀರಿನ ಬಣ್ಣ ತಿರುಗಿದ್ದು, ಸ್ಥಳೀಯರಷ್ಟೇ ಅಲ್ಲದೆ ಪ್ರಕೃತಿ ಪ್ರಿಯರು ಹಾಗೂ ವಿಜ್ಞಾನಿಗಳಲ್ಲಿಯೂ ಸೋಜಿಗವನ್ನು ಉಂಟು ಮಾಡಿದೆ.

ಗುಲಾಬಿ ಬಣ್ಣದಲ್ಲಿ ನೀರು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಆದರೆ, ಈ ಬಾರಿ ಅದರ ವ್ಯಾಪ್ತಿ ವಿಸ್ತೃತವಾಗಿದೆ ಎಂದು ಪರಿಣತರು ಅಭಿಪ್ರಾಯಡುತ್ತಾರೆ.

ರಾಷ್ಟ್ರೀಯ ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಸರೋವರವನ್ನು ಘೋಷಿಸಲಾಗಿದೆ. ನೀರಿನಲ್ಲಿ ಲವಣದ ಅಂಶಗಳಿವೆ ಎಂದು ಲೋನಾರ್ ಸರೋವರ ಸಂರಕ್ಷಣಾ ಸಮಿತಿಯ ಸದಸ್ಯ ಗಜಾನನ ಖಾರತ್ ಅಭಿಪ್ರಾಯಪಡುತ್ತಾರೆ.

ಕೆರೆಯಲ್ಲಿ ಪಾಚಿ ಕಟ್ಟಿದೆ. ಪಾಚಿ ಮತ್ತು ಲವಣದ ಅಂಶಗಳಿಂದ ಈ ನೋಟ ಕಂಡುಬಂದಿರಬಹುದು. ನೀರಿನಲ್ಲಿ ಒಂದು ಮೀಟರ್ ಕೆಳಗೆ ಆಮ್ಲಜನಕವಿಲ್ಲ. ಇರಾನ್ನಲ್ಲಿಯೂ ಇಂಥದೇ ಒಂದು ಸರೋವರ ಇದ್ದು, ಅಲ್ಲಿ ಪಾಚಿಯ ಪರಿಣಾಮ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ ಎಂದು ಖಾರತ್ ಹೇಳುತ್ತಾರೆ.

ಔರಂಗಾಬಾದ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠಾವಾಡಾ ವಿಶ್ವವಿದ್ಯಾಲಯದ ಭೂಗೋಳ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮದನ್ ಸೂರ್ಯವಂಶಿ ಅವರು, ನೀರಿನ ಬಣ್ಣವನ್ನು ಗಮನಿಸಿದರೆ ಇದಕ್ಕೆ ಮನುಷ್ಯನ ಹಸ್ತಕ್ಷೇಪ ಕಾರಣವಿರಲಾರದು ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.