ಮುಂಬೈ: ಇಲ್ಲಿನ ಚಿಂಚ್‌ಪೋಕಲಿ ಪ್ರದೇಶದಲ್ಲಿರುವ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆಡಳಿತಕ್ಕೊಳಪಟ್ಟ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶನಿವಾರ ಎಲ್‌ಪಿಜಿ ಸೋರಿಕೆಯಾಗಿ ಆತಂಕಕ್ಕೆ ಕಾರಣವಾಯಿತು.

20 ಮಂದಿ ಕೋವಿಡ್ ಸೋಂಕಿತರೂ ಸೇರಿದಂತೆ 58 ರೋಗಿಗಳು ಆಸ್ಪತ್ರೆಯಲ್ಲಿದ್ದರು. ಇವರನ್ನು ಸ್ಥಳಾಂತರಿಸಲಾಗಿದೆ.

ಬೆಳಿಗ್ಗೆ 11.34ರ ವೇಳೆಗೆ ಎಲ್‌ಪಿಜಿ ಸೋರಿಕೆಯಾಗಿದೆ. ಇದು ರೋಗಿಗಳಲ್ಲಿ, ಅವರ ಕುಟುಂಬದವರಲ್ಲಿ ಮತ್ತು ಆಸ್ಪತ್ರೆ ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಯಿತು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಸುರಕ್ಷತಾ ಕ್ರಮವಾಗಿ ಎಲ್ಲರನ್ನೂ ಸ್ಥಳಾಂತರಿಸಲಾಗಿದೆ. ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.