ಚೆನ್ನೈ: ದಿನಕರನ್ ಬಣದಲ್ಲಿ ಗುರುತಿಸಿಕೊಂಡಿದ್ದ ಎಎಐಡಿಎಂಕೆ ಪಕ್ಷದ 18 ಶಾಸಕರು ಅನರ್ಹರು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.ಶಾಸಕರನ್ನು ಅನರ್ಹಗೊಳಿಸಿದ್ದ ತಮಿಳುನಾಡು ಸ್ಪೀಕರ್ ನಿರ್ಧಾರವನ್ನು ಸರಿ ಎಂದು ಹೇಳಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸತ್ಯ ನಾರಾಯಣ್ ಈ ತೀರ್ಪು ನೀಡಿದ್ದಾರೆ.

ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿ 2017 ಸೆಪ್ಟೆಂಬರ್ 18ರಂದು ಸ್ಪೀಕರ್ ಪಿ.ಧನಪಾಲನ್ ಅವರನ್ನು ಸಮೀಪಿಸಿದ್ದ ಎಎಐಡಿಎಂಕೆ ಪಕ್ಷದ 18 ಶಾಸಕರನ್ನು ಅನರ್ಹ ಮಾಡಲಾಗಿತ್ತು. ಸ್ಪೀಕರ್ ಅವರ ತೀರ್ಮಾನವನ್ನು ಪ್ರಶ್ನಿಸಿ ಈ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದರು.

1986ರ ಪಕ್ಷಾಂತರ ವಿರೋಧಿ ಮತ್ತು ಅನರ್ಹತೆ ನಿಯಮಗಳ ಅಡಿಯಲ್ಲಿ 18 ಶಾಸಕರನ್ನು ಅನರ್ಹಗೊಳಿಸಲಾಗಿತ್ತು.
ಹೈಕೋರ್ಟ್ ನ ವಿಭಾಗೀಯ ಪೀಠ ಕೂಡಾ ಶಾಸಕರು ಅನರ್ಹರು ಎಂದು ಹೇಳಿದ ಕಾರಣ ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ

ತೀರ್ಪಿನ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಟಿಟಿವಿ ದಿನಕರನ್, ಇದು ಹಿನ್ನಡೆ ಎಂದು ನಾವು ಹೇಳುವುದಿಲ್ಲ, ಇದು ಅನುಭವ. ಈ ಪರಿಸ್ಥಿತಿಯನ್ನು ನಾವು ನಿಭಾಯಿಸುತ್ತೇವೆ. 18 ಶಾಸಕರು ಸಭೆ ಸೇರಿ ತೀರ್ಮಾನ ಕೈಗೊಳುತ್ತೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.