ನಾಗ್ಪುರ: ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ಪೋಲಿಯೊ ಲಸಿಕೆ ಬದಲು ಹ್ಯಾಂಡ್ ಸ್ಯಾನಿಟೈಸರ್ ಹನಿಗಳನ್ನು ಹಾಕಿ ಅಸ್ವಸ್ಥಗೊಂಡಿದ್ದ 12 ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಕಪ್ಸಿಕೊಪ್ರಿ ಗ್ರಾಮದ ಭನ್ಬೋರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಈ ಘಟನೆ ನಡೆದಿತ್ತು. ‘ಈ ಘಟನೆಯ ಬಗ್ಗೆ ತನಿಖೆ ಪೂರ್ಣಗೊಂಡಿದೆ. ಸಂಬಂಧಪಟ್ಟ ನೌಕರರು ಜಿಲ್ಲಾ ಪರಿಷತ್ ಸಿಇಒ ಅವರಿಗೆ ವರದಿ ಸಲ್ಲಿಸಿದ್ದಾರೆ. ಇಬ್ಬರು ವೈದ್ಯಕೀಯ ಅಧಿಕಾರಿಗಳು ಮತ್ತು ಮೂವರು ಗುತ್ತಿಗೆ ನೌಕರರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.ತಪ್ಪಿತಸ್ಥರ ಮೇಲೆ ರಾಜ್ಯಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಯಾವತ್ಮಲ್ ಜಿಲ್ಲಾಧಿಕಾರಿ ಎಂ.ಡಿ. ಸಿಂಗ್ ತಿಳಿಸಿದ್ದಾರೆ.

ಭಾನುವಾರವೇ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದ ಸಿಂಗ್, ‘ಮಕ್ಕಳ ಆರೋಗ್ಯದ ಮೇಲೆ 48 ಗಂಟೆಗಳ ಕಾಲ ನಿಗಾ ವಹಿಸಲಾಗಿತ್ತು. ಈಗ ಅವರು ಚೇತರಿಸಿಕೊಂಡಿದ್ದಾರೆ. ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ... ಸ್ಪೂಟ್ನಿಕ್-ವಿ 91.6% ಪರಿಣಾಮಕಾರಿ: ಕೋವಿಡ್ಗೆ ಹೊಸ ಅಸ್ತ್ರ ಎಂದ ವಿಜ್ಞಾನಿಗಳು

5 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಮಕ್ಕಳಿಗೆ ಪೋಲಿಯೊ ಹನಿಗಳ ಬದಲು ಎರಡು ಹನಿ ಸ್ಯಾನಿಟೈಸರ್ ನೀಡಲಾಗಿತ್ತು. ಇದರಿಂದಾಗಿ ಒಂದು ಮಗುವಿಗೆ ವಾಂತಿ ಮತ್ತು ಬಳಲಿಕೆ ಕಾಣಿಸಿಕೊಂಡ ನಂತರ ಈ ಎಲ್ಲ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಯಾವತ್ಮಲ್ ಜಿಲ್ಲಾ ಪರಿಷತ್ ಸಿಇಒ ಶ್ರೀಕೃಷ್ಣ ಪಂಚಲ್ ಸೋಮವಾರ ಹೇಳಿದ್ದರು.

ಹಳ್ಳಿಯ ಸರಪಂಚ ಪರಿಶೀಲಿಸಿದಾಗ ಅದು ಪೋಲಿಯೊ ಹನಿ ಅಲ್ಲ,ಹ್ಯಾಂಡ್ ಸ್ಯಾನಿಟೈಸರ್ ಎಂಬುದು ಬೆಳಕಿಗೆ ಬಂದಿತ್ತು. ಘಟನೆಯ ನಂತರ, ಆ ಪ್ರದೇಶದ ಪೋಷಕರು ಭಯಭೀತಗೊಂಡಿದ್ದಾರೆ. ಜತೆಗೆ ಈ ಲೋಪಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.