ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಟೊಮೆಟೊ ಕಾವಲಿಗೆ ಸಿಸಿಟಿವಿ ಮೊರೆ ಹೋದ ರೈತ

Published 8 ಆಗಸ್ಟ್ 2023, 12:46 IST
Last Updated 8 ಆಗಸ್ಟ್ 2023, 12:46 IST
ಅಕ್ಷರ ಗಾತ್ರ

ಔರಂಗಾಬಾದ್‌: ಗಗನಕ್ಕೇರಿದ ಬೆಲೆ ನಡುವೆಯೂ ಬಹು ಬೇಡಿಕೆ ಹೊಂದಿರುವ ಟೊಮೆಟೊ ಬೆಳೆ ಕಾವಲಿಗೆ ಮಹಾರಾಷ್ಟ್ರ ರೈತ ಸಿಸಿಟಿವಿ ಕ್ಯಾಮೆರಾ ಮೊರೆ ಹೋಗಿದ್ದಾರೆ.

‘ದೇಶದಾದ್ಯಂತ ಪ್ರಸ್ತುತ ಟೊಮೆಟೊ ₹100– 200‌ಕ್ಕೆ ಮಾರಾಟವಾಗುತ್ತಿದೆ. 10 ದಿನಗಳ ಹಿಂದೆ 22–25 ಕೆಜಿಯ ಕ್ರೇಟ್‌ ಕಳ್ಳತನವಾಗಿದೆ. ಆದ್ದರಿಂದ ‌₹22,000 ವೆಚ್ಚ ಮಾಡಿ ಹೊಲಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೇವೆ’ ಎಂದು ಔರಂಗಾಬಾದ್‌ನಿಂದ 20 ಕಿ.ಮೀ.ದೂರದಲ್ಲಿರುವ ಶಹ್‌ಪುರ್‌ ಬಂಜಾರ್‌ನ ರೈತ ಶರದ್‌ ರಾವ್ತೆ ತಿಳಿಸಿದ್ದಾರೆ.

‘ಪ್ರಸ್ತುತ 22–25 ಕೆಜಿಯುಳ್ಳ ಟೊಮೆಟೊ ಕ್ರೇಟ್‌ ‌₹3000ಕ್ಕೆ ಮಾರಾಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಬೆಳೆ ಕಳ್ಳರ ಪಾಲಾಗಲು ಬಿಡಲಾಗುವುದಿಲ್ಲ. 5 ಎಕರೆ ಕೃಷಿ ಭೂಮಿ ಹೊಂದಿದ್ದು, ಅದರಲ್ಲಿ 1.5 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದೇನೆ. ಕನಿಷ್ಠ 6–7 ಲಕ್ಷ ಆದಾಯ ಸಿಗಲಿದೆ’ ಎಂದಿದ್ದಾರೆ.

‘ಸಿಸಿಟಿವಿ ಕ್ಯಾಮೆರಾವು ಸೌರಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ. ಅಲ್ಲಿನ ದೃಶ್ಯಗಳನ್ನು ಎಲ್ಲಿ ಕೂತು ಬೇಕಾದರೂ ಮೊಬೈಲ್‌ನಲ್ಲಿ ವೀಕ್ಷಿಸಬಹುದಾಗಿದೆ’ ಎಂದು ರಾವ್ತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT