ಠಾಣೆ: ಅಪಾಯಕಾರಿ ಶಿಲೀಂಧ್ರ ಸೋಂಕಿನಿಂದ (ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್) ಇಬ್ಬರು ಕೋವಿಡ್–19 ರೋಗಿಗಳು ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಬ್ಲಾಕ್ ಫಂಗಸ್ ಸೋಂಕಿಗೆ ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಠಾಣೆ ಗ್ರಾಮೀಣ ಪ್ರದೇಶದ 38 ವರ್ಷ ವಯಸ್ಸಿನ ಕೋವಿಡ್ ರೋಗಿ ಮತ್ತು ಡೋಂಬಿವಲಿಯಲ್ಲಿ ಮತ್ತೊಬ್ಬ ರೋಗಿ ಬ್ಲಾಕ್ ಫಂಗಸ್‌ನಿಂದ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿ ಡಾ.ಅಶ್ವಿನಿ ಪಾಟಿಲ್ ಹೇಳಿದ್ದಾರೆ.

'ರಾಜ್ಯದಲ್ಲಿ ಪ್ರಸ್ತುತ ಸುಮಾರು 2,000 ಮ್ಯೂಕೋರ್ಮೈಕೋಸಿಸ್ ರೋಗಿಗಳಿರಬಹುದು. ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬ್ಲಾಕ್ ಫಂಗಸ್ ಸೋಂಕಿತರ ಸಂಖ್ಯೆಯೂ ಏರಿಕೆಯಾಗಬಹುದು' ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಮಂಗಳವಾರ ಹೇಳಿದ್ದರು.

ವೈದ್ಯಕೀಯ ಕಾಲೇಜುಗಳೊಂದಿಗೆ ಸೇರ್ಪಡೆಯಾಗಿರುವ ಆಸ್ಪತ್ರೆಗಳನ್ನು ಬ್ಲಾಕ್ ಫಂಗಸ್ ಚಿಕಿತ್ಸಾ ಕೇಂದ್ರಗಳಾಗಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಕೋವಿಡ್ ರೋಗಿಗಳಲ್ಲಿ ಹೆಚ್ಚುತ್ತಿದೆ ಶಿಲೀಂಧ್ರ ಸೋಂಕು: ದೃಷ್ಟಿಹೀನತೆಯ ಅಪಾಯ

ಸಾಮಾನ್ಯವಾಗಿ ಡಯಾಬಿಟಿಸ್ ಇರುವ ರೋಗಿಗಳಲ್ಲಿ ಈ ಸೋಂಕು ಕಂಡು ಬರುತ್ತಿದೆ, ಇತರೆ ಕೋವಿಡ್–19 ರೋಗಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮಧುಮೇಹದ ರೋಗಿಗಳು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅವಶ್ಯವಾಗಿದೆ ಎಂದು ಡಾ.ಅಶ್ವಿನಿ ತಿಳಿಸಿದ್ದಾರೆ.

ತಜ್ಞ ವೈದ್ಯರ ಪ್ರಕಾರ, ಬ್ಲಾಕ್ ಫಂಗಸ್ ಸೋಂಕಿಗೆ ಒಳಗಾಗಿದ್ದವರಿಗೆ ತಲೆ ನೋವು, ಜ್ವರ, ಕಣ್ಣಿನ ಕೆಳ ಭಾಗದಲ್ಲಿ ನೋವು, ಮೂಗು ಕಟ್ಟುವುದು ಹಾಗೂ ದೃಷ್ಟಿ ಅಸ್ಪಷ್ಟವಾಗುವ ಲಕ್ಷಣಗಳು ಕಂಡು ಬರುತ್ತವೆ.

ಕೋವಿಡ್–19 ರೋಗಿಗಳಿಗೆ ಸ್ಟೆರಾಯ್ಡ್ ನೀಡುವ ಬಗ್ಗೆ ನಿಗದಿತ ರೂಪುರೇಷೆ ಸಿದ್ಧಪಡಿಸಲು ಕಾರ್ಯಪಡೆ ರಚಿಸುವಂತೆ ಸಂಸದ ಡಾ.ಶ್ರೀಕಾಂತ್ ಶಿಂದೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇನ್ನಷ್ಟು ಓದು...

* ದೃಷ್ಟಿಯ ಜತೆ ಜೀವ ಕಸಿಯುವ ಶಿಲೀಂಧ್ರ ಸೋಂಕು
* ಬ್ಲ್ಯಾಕ್ ಫಂಗಸ್: ವರದಿ ಬಳಿಕ ತೀರ್ಮಾನ – ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.