ಮುಂಬೈ: ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಡೆ ಅವರ ಆಪ್ತ ಸಹಾಯಕನ ಪತ್ನಿ ಕೇಂದ್ರ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
.ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ:100 ಕೌನ್ಸಿಲರ್ಗಳ ಅವಿರೋಧ ಆಯ್ಕೆ;ಬಿಜೆಪಿ.
ರಾಜ್ಯ ಪಶುಸಂಗೋಪನೆ ಮತ್ತು ಪರಿಸರ ಸಚಿವೆ ಮುಂಡೆ ಅವರ ಆಪ್ತ ಸಹಾಯಕ ಅನಂತ್ ಗರ್ಜೆ ಅವರ ಪತ್ನಿ ಗೌರಿ ಪಾಳ್ವೆ ಅವರು ಶನಿವಾರ ಸಂಜೆ ವೊರ್ಲಿ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವರು ಈ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ಪಾಲಿಕೆ ನಡೆಸುವ ಕೆಇಎಂ ಆಸ್ಪತ್ರೆಯ ದಂತ ವಿಭಾಗದಲ್ಲಿ ಗೌರಿ ವೈದ್ಯರಾಗಿದ್ದರು ಎಂದು ಅವರು ಹೇಳಿದರು.
.ಬೆಳಗಾವಿ: ಗಡಿಯೊಳಗೆ ನುಗ್ಗಲು ಮಹಾರಾಷ್ಟ್ರ ಸಂಸದ, ಎಂಇಎಸ್ ಪುಂಡರ ವಿಫಲ ಯತ್ನ.
ಪತಿಯಿಂದ ಗೌರಿ ಕಿರುಕುಳಕ್ಕೆ ಒಳಗಾಗಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೌಟುಂಬಿಕ ಕಲಹಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಮಹಾರಾಷ್ಟ್ರ: ಇಸ್ಲಾಂಪುರ ಪಟ್ಟಣಕ್ಕೆ ಈಶ್ವರಪುರ ಎಂದು ಮರುನಾಮಕರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.