ಗುವಾಹಟಿ: ಅಸ್ಸಾಂನ ಉಗ್ರಗಾಮಿ ಗುಂಪುಗಳಲ್ಲಿ ಒಂದಾದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೊ ಲ್ಯಾಂಡ್ (ಎನ್ಡಿಎಫ್ಬಿ)ನ ಒಳಪಂಗಡಕ್ಕೆ ಸೇರಿದ 1615 ಬೋಡೊ ಉಗ್ರರು ಗುರುವಾರಶಸ್ತ್ರ ತ್ಯಾಗ ಮಾಡಿದ್ದಾರೆ.

ಎನ್ಡಿಎಫ್ಬಿನೊಂದಿಗೆ ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಮಹಾತ್ಮ ಗಾಂಧಿ ಪುಣ್ಯತಿಥಿಯಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ಸೋನೋವಾಲ್ ಅವರ ಮುಂದೆಬೋಡೊ ಸಂಘಟನೆಯ ನಾಲ್ವರು ನಾಯಕರು ಶಸ್ತ್ರ ತ್ಯಾಗ ಮಾಡಿದ್ದಾರೆ.

ಬೋಡೊ ಸಮುದಾಯದ ಏಳಿಗೆಗಾಗಿ ಶಸ್ತ್ರ ಕೈಗೆತ್ತಿಕೊಂಡಿದ್ದಈಬಂಡಾಯಗಾರರು ಗಾಂಧಿ ಪುಣ್ಯತಿಥಿಯಂದು ಶಸ್ತ್ರತ್ಯಾಗ ಮಾಡಿರುವುದು ವಿಶೇಷವಾಗಿದೆ. ರಾಷ್ಟ್ರಪಿತ ಗಾಂಧೀಜಿಯವರ ಆಶಯದಂತೆ ಇವರು ಹಿಂಸೆಯನ್ನು ತ್ಯಜಿಸಿ ಶಾಂತಿಯನ್ನು ಬಯಸಿದ್ದಾರೆ. ಇವರನ್ನು ನಾವು ಮುಖ್ಯವಾಹಿನಿಗೆ ಸ್ವಾಗತಿಸಿದ್ದು, ಉತ್ತಮ ರೀತಿಯಲ್ಲಿ ಇವರು ಜೀವನ ಸಾಗಿಸಲು ಸರ್ಕಾರಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸೋನೋವಾಲ್ ಹೇಳಿದ್ದಾರೆ.

ಇದನ್ನೂ ಓದಿ:ಬೋಡೊ ಸಮಸ್ಯೆ ಪರಿಹಾರಕ್ಕೆ ಮುನ್ನುಡಿ

ಎಕೆ ಸರಣಿಯ ರೈಫಲ್ಗಳು, ಎಂ16, ಹೆಕ್ಲರ್ ಅಂಡ್ ಕೋಚ್, ಬಾಂಬ್ಗಳು ಮತ್ತುಇತರ ಶಸ್ತ್ರಗಳು ಸೇರಿದಂತೆ ಒಟ್ಟು 178 ಶಸ್ತ್ರಾಸ್ತ್ರಗಳನ್ನು ಉಗ್ರರು ಮುಖ್ಯಮಂತ್ರಿಯ ಸುಪರ್ದಿಗೆ ಒಪ್ಪಿಸಿದ್ದಾರೆ.

ಅಸ್ಸಾಂನಲ್ಲಿ ದಂಗೆಯೇಳುವ ಮುನ್ನ ಈ ಗುಂಪಿನ ಸದಸ್ಯರು ಭೂತಾನ್, ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್ನಲ್ಲಿ ತರಬೇತಿ ಪಡೆಯುತ್ತಾರೆ. ಮೂರು ಗುಂಪುಗಳು ಈಗಾಗಲೇ ತಮ್ಮ ಕಾರ್ಯಾಚರಣೆ ನಿಲ್ಲಿಸುವುದಾಗಿ ಸರ್ಕಾರದ ಒಪ್ಪಂದಕ್ಕೆ ಸಹಿ ಮಾಡಿದ್ದವು. ಬಿ.ಸಾವೊರೈಗ್ವಾರ ನೇತೃತ್ವದ ಗುಂಪುಇತ್ತೀಚೆಗೆ ಮ್ಯಾನ್ಮಾರ್ನಿಂದ ಬಂದು ಮಾತುಕತೆಯಲ್ಲಿ ಭಾಗವಹಿಸಿತ್ತು.

ಬೋಡೊಲ್ಯಾಂಡ್ಗಾಗಿ ಹಿಂಸಾತ್ಮಕ ರೀತಿಯಲ್ಲಿ ಹೋರಾಡುತ್ತಿದ್ದ ಈ ಹೋರಾಟವು ನಿಲ್ಲಲಿದ್ದು, ಇನ್ನು ಮುಂದೆ ಬೋಡೊ ಮತ್ತು ಬೋಡೊ ಅಲ್ಲದವರು ಜತೆಯಾಗಿ ಶಾಂತಿಯಿಂದ ಬದುಕಲಿದ್ದಾರೆ ಎಂದು ಅಸ್ಸಾಂ ಸಚಿವ ಹಿಮಾಂತಾ ಬಿಸ್ವ ಶರ್ಮಾ ಹೇಳಿದ್ದಾರೆ.

ಅಸ್ಸಾಂನ ಎಂಟು ಉಗ್ರ ಸಂಘಟನೆಗಳ 644 ಸದಸ್ಯರು ಶಸ್ತ್ರ ತ್ಯಾಗ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.