ಶಿಯೋಪುರ್: ಭಾರತದಲ್ಲಿ ಜನಿಸಿದ ‘ಮುಖಿ’ ಹೆಸರಿನ ಚೀತಾ, ಕುನೊ ರಾಷ್ಟ್ರೀಯ ಉದ್ಯಾನದಲ್ಲಿ, 5 ಮರಿಗಳಿಗೆ ಗುರುವಾರ ಜನ್ಮ ನೀಡಿದೆ. ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಕ್ಕೆ ‘ಮುಖಿ’ ಜನಿಸಿತ್ತು.

2 ವರ್ಷ 11 ತಿಂಗಳ ವಯಸ್ಸಿನ ಮುಖಿ, ಭಾರತದಲ್ಲಿ ಜನಿಸಿದ ಮೊದಲ ಹೆಣ್ಣು ಚೀತಾ. ಇದೀಗ ಮರಿಗಳಿಗೆ ಜನ್ಮ ನೀಡಿದ ಮೊದಲ ಭಾರತೀಯ ಚೀತಾವೂ ಆಗಿದೆ.

ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಮೊಹನ್ ಯಾದವ್ ಅವರು ‘ಭಾರತದಲ್ಲಿ ಜನಿಸಿದ ಚೀತಾ 5 ಮರಿಗಳಿಗೆ ಜನ್ಮ ನೀಡಿರುವುದು ಚೀತಾ ಯೋಜನೆಯ ಅಭೂತಪೂರ್ವ ಪ್ರಗತಿಯಾಗಿದೆ. ಈ ಮೂಲಕ ಯೋಜನೆಯು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ’ ಎಂದು ಹೇಳಿದ್ದಾರೆ.

ನಮೀಬಿಯಾದಿಂದ ತರಲಾಗಿದ್ದ ಚೀತಾಗಳ ಪೈಕಿ ಅನೇಕ ಚೀತಾಗಳು ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳದೆ ಮೃತಪಟ್ಟವು. ಮುಖಿ ಭಾರತದಲ್ಲೇ ಜನಿಸಿದ್ದರಿಂದ ಈ ವಾತಾವರಣಕ್ಕೆ ಹೊಂದಿಕೊಂಡಿದೆ. ಇದರ ಮರಿಗಳೂ ಇದೇ ರೀತಿ ಆರೋಗ್ಯವಾಗಿರಲಿದ್ದು, ಚೀತಾಗಳ ಸಂತಾನೋತ್ಪತ್ತಿ ಮೂಲಕ ದೇಶದಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ನಶಿಸಿ ಹೋಗಿದ್ದ ಚೀತಾ ಸಂತತಿಯನ್ನು ಮತ್ತೆ ಅಭಿವೃದ್ಧಿಪಡಿಸಲು, ‘ಪ್ರಾಜೆಕ್ಟ್ ಚೀತಾ’ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ನಮಿಬೀಯಾದಿಂದ 5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನು ತಂದು, ಕುನೊ ರಾಷ್ಟ್ರೀಯ ಉದ್ಯಾನಕ್ಕೆ 2022ರ ಸೆ.17ರಂದು ಬಿಡಲಾಯಿತು.
.ಭಾರತದಲ್ಲೇ ಜನಿಸಿರುವ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ: MP ಸಿಎಂ ಮೋಹನ್ ಯಾದವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.