ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನ್‌ಲೈನ್‌ನಲ್ಲಿ ₹1.5 ಲಕ್ಷ ಬೆಲೆಯ ಐ–ಫೋನ್‌ ಖರೀದಿ: ಡೆಲಿವರಿಬಾಯ್‌ ಕೊಲೆ

Published : 30 ಸೆಪ್ಟೆಂಬರ್ 2024, 15:51 IST
Last Updated : 30 ಸೆಪ್ಟೆಂಬರ್ 2024, 15:51 IST
ಫಾಲೋ ಮಾಡಿ
Comments

ಲಖನೌ: ಇ–ಕಾಮರ್ಸ್‌ ಕಂಪನಿಯೊಂದರಿಂದ ಸುಮಾರು ₹1.5 ಲಕ್ಷ ಮೌಲ್ಯದ ಸೆಲ್‌ ಫೋನ್‌ ಖರೀದಿಸಿದ ವ್ಯಕ್ತಿಯು, ಅದನ್ನು ವಿತರಿಸಲು ಬಂದಿದ್ದ ಡೆಲಿವರಿಬಾಯ್‌ ಅನ್ನು ಕೊಂದಿರುವ ಘಟನೆ ಇಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ನಿಶಾಂತ್‌ ಗಂಜ್‌ ಪ್ರದೇಶದ ನಿವಾಸಿ ಭರತ್‌ ಸಾಹು ಎಂದು ಗುರುತಿಸಲಾಗಿದೆ. ಇಲ್ಲಿನ ಚಿನ್ಹತ್‌ ಪ್ರದೇಶದ ನಿವಾಸಿ ಗಜೇಂದ್ರ ಕುಮಾರ್‌ ಎಂಬುವರು ₹1.5 ಲಕ್ಷ ಮೌಲ್ಯದ ‘ಐ–ಫೋನ್‌’ ಅನ್ನು ಇ–ಕಾಮರ್ಸ್‌ ಕಂಪನಿಯೊಂದರಿಂದ ಖರೀದಿಸಿದ್ದರು. ಅವರು ‘ಕ್ಯಾಶ್‌ ಆನ್‌ ಡೆಲಿವರಿ’ ವಿಧಾನವನ್ನು ಆಯ್ಕೆಯನ್ನು ಮಾಡಿಕೊಂಡಿದ್ದರು. 

ಅದರಂತೆ ಡೆಲಿವರಿಬಾಯ್‌ ಫೋನ್‌ ಅನ್ನು ಸೆಪ್ಟೆಂಬರ್‌ 23ರ ಸಂಜೆ ಗಜೇಂದ್ರ ಅವರಿಗೆ ವಿತರಿಸಿ ನಗದು ಪಾವತಿಸುವಂತೆ ಕೇಳಿದಾಗ,  ಮನೆಯೊಳಗೆ ಕರೆದ ಗಜೇಂದ್ರ ತನ್ನ ಸಹಚರನ ಜತೆ ಭರತ್‌ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಮೃತ ದೇಹವನ್ನು ಚೀಲದಲ್ಲಿ ಕಟ್ಟಿ ಸಮೀಪದ ಇಂದಿರಾ ಕಾಲುವೆಗೆ ಎಸೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಭರತ್‌ ಕಾಣೆಯಾದ ಕುರಿತು ಅವರ ಕುಟುಂಬದವರು ದೂರು ನೀಡಿದ ಬಳಿಕ ತನಿಖೆ ಕೈಗೆತ್ತಿಕೊಳ್ಳಲಾಯಿತು. ಭರತ್ ಅವರ ಮೊಬೈಲ್‌ನಿಂದ ಕೊನೆಯದಾಗಿ ಕರೆ ಹೋಗಿದ್ದ ಗಜೇಂದ್ರ ಅವರನ್ನು ತನಿಖೆಗೆ ಒಳಪಡಿಸಿದಾಗ ಕೊಲೆಯ ವಿಷಯ ಗೊತ್ತಾಯಿತು. ಬಳಿಕ ಆತನನ್ನು ಸೋಮವಾರ ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದರು.

ಡೆಲಿವರಿಬಾಯ್‌ನ ದೇಹ ಪತ್ತೆಗಾಗಿ ಕಾಲುವೆಯಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದ ಅವರು, ಆರೋಪಿಯ ಸಹಚರನ ಪತ್ತೆಗೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT