ನವದೆಹಲಿ (ಪಿಟಿಐ): ‘ವಿವಾಹದ ಪ್ರಸ್ತಾಪವನ್ನು ನಿರಾಕರಿಸಿದ ಯುವತಿಯನ್ನು ಸುಮಾರು 13 ಬಾರಿ ಇರಿದ 27 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಗೌರವ್ ಪಾಲ್ ಬಂಧಿತ ಯುವಕ. ದಕ್ಷಿಣ ದೆಹಲಿಯ ಲಡೋ ಸರಾಯಿ ಪ್ರದೇಶದಲ್ಲಿ ಯುವತಿಗೆ ಗುರುವಾರ ಮುಂಜಾನೆ ಇರಿಯಲಾಗಿದೆ’ ಎಂದಿದ್ದಾರೆ.
‘ಗೌರವ್ ಪಾಲ್‌ನ ಚಿಕ್ಕಪ್ಪ ಸೇರಿದಂತೆ ಇಬ್ಬರು ಸಂಬಂಧಿಕರು ಕಳೆದ ತಿಂಗಳು ವಿವಾಹ ಪ್ರಸ್ತಾಪದೊಂದಿಗೆ ಯುವತಿಯ ಕುಟುಂಬವನ್ನು ಭೇಟಿಯಾಗಿದ್ದರು. ಆದರೆ ಜಾತಿಯ ಕಾರಣದಿಂದ ಯುವತಿಯ ತಾಯಿ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಅಲ್ಲದೇ ಯುವತಿ ಸಹ ಪಾಲ್‌ನ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಿದ್ದರು. ಇದನ್ನು ಸಹಿಸಿಕೊಳ್ಳಲಾಗದೇ ಪಾಲ್ ಈ ಕೃತ್ಯ ಎಸಗಿದ್ದಾನೆ’ ಎಂದು ಮಾಹಿತಿ ನೀಡಿದ್ದಾರೆ.
‘ಆರೋಪಿಯು ಯುವತಿಯ ಮುಖ, ತೊಡೆ ಹಾಗೂ ಕೈಗಳಿಗೆ ಚಾಕುವಿನಿಂದ ಇರಿದಿದ್ದಾನೆ. ಆತನ ವಿರುದ್ಧ ಸೆಕ್ಷನ್ 307ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದು, ಯುವತಿ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.