ಇಂಫಾಲ್: 2015ರಲ್ಲಿ ಮ್ಯಾನ್ಮರ್ ನೆಲದಲ್ಲಿ ನಡೆಸಿದ್ದ ನಿರ್ದಿಷ್ಟ ದಾಳಿಯಲ್ಲಿ (ಸರ್ಜಿಕಲ್ ಸ್ಟ್ರೈಕ್‌ನಲ್ಲಿ) ಪ್ರಮುಖ ಪಾತ್ರ ವಹಿಸಿದ್ದ ನಿವೃತ್ತ ಸೇನಾಧಿಕಾರಿಗೆ ಸಂಘರ್ಷ ಪೀಡಿತ ಮಣಿಪುರದಲ್ಲಿ ಶಾಂತಿ ಸ್ಥಾಪನೆಯ ಜವಾಬ್ದಾರಿ ನೀಡಲಾಗಿದೆ.

ಎರಡು ತಿಂಗಳಲ್ಲಿ ಹಿಂಸಾಚಾರದಿಂದಾಗಿ 170 ಮಂದಿ ಮೃತಪಟ್ಟಿರುವ ಈಶಾನ್ಯ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಅಲ್ಲಿನ ಮಣಿಪುರ ಸರ್ಕಾರಕ್ಕೆ ನೆರವಾಗುವಂತೆ ನಿವೃತ್ತ ಕರ್ನಲ್ ನೆಕ್ಟರ್ ಸಂಜೆನ್‌ಬಮ್ ಅವರನ್ನು ಹಿರಿಯ ವರಿಷ್ಠಾಧಿಕಾರಿಯನ್ನಾಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗಿದೆ. ಇವರು ಮಣಿಪುರ ಪೊಲೀಸ್ ಇಲಾಖೆ ಅಡಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಜೂನ್ 12 ರ ಕ್ಯಾಬಿನೆಟ್ ನಿರ್ಧಾರದ ಬಳಿಕ ನೇಮಕಾತಿ ಮಾಡಲಾಗಿದೆ ಎಂದು ಮಣಿಪುರದ ಜಂಟಿ ಕಾರ್ಯದರ್ಶಿ (ಗೃಹ) ಈಚೆಗೆ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಕಳೆದ ಐದು ದಿನಗಳಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯ ಪ್ರಾಬಲ್ಯದ ಪ್ರದೇಶದ ಗಡಿಯಲ್ಲಿ ನಡೆಯುತ್ತಿರುವ ಗುಂಡಿನ ದಾಳಿ ಮತ್ತು ಸ್ಫೋಟಕ ಘಟನೆಗಳಲ್ಲಿ 12 ಜನರು ಮೃತಪಟ್ಟು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.