ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‌ ಕಿ ಬಾತ್‌: ಕನ್ನಡ ಹಾಡು ಹಾಡಿದ ವಿದೇಶಿ ಪ್ರಜೆ ಉಲ್ಲೇಖಿಸಿದ ಮೋದಿ

Published 24 ಸೆಪ್ಟೆಂಬರ್ 2023, 11:30 IST
Last Updated 24 ಸೆಪ್ಟೆಂಬರ್ 2023, 11:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕಿ ಬಾತ್‌ನ 105ನೇ ಸಂಚಿಕೆಯಲ್ಲಿ ಜರ್ಮನಿಯ ಕ್ಯಾಸ್ಮೆ ಅವರು ಭಾರತೀಯ ಸಂಗೀತದ ಬಗೆಗಿನ ವಿಶೇಷ ಒಲವನ್ನು ಹೊಂದಿರುವ ಬಗ್ಗೆ ಮಾತನಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ದೃಷ್ಟಿ ಕಳೆದುಕೊಂಡಿರುವ ಜರ್ಮನಿಯ 21 ವರ್ಷದ ಕ್ಯಾಸ್ಮೆ ಅವರಿಗೆ ವಿಕಲಚೇತನತೆ ಎಂದೂ ಅಡ್ಡಿಯಾಗಿಲ್ಲ. ಭಾರತೀಯ ಭಾಷೆಗಳಲ್ಲಿ ಕ್ಯಾಸ್ಮೆ ಅವರು ಹಾಡುವುದನ್ನು ಕೇಳಿದರೆ ನೀವು ಮಂತ್ರಮುಗ್ಧರಾಗುತ್ತೀರಿ. ಸಂಗೀತ ಬಗೆಗೆ ಅಪಾರ ಒಲವನ್ನು ಹೊಂದಿರುವ ಅವರು ಕನ್ನಡ ಭಾಷೆಯಲ್ಲೂ ಹಾಡಿದ್ದಾರೆ. ಕ್ಯಾಸ್ಮೆ ಹಾಡಿರುವ ಕ್ಲಿಪ್‌ ಒಂದನ್ನು ಇಂದು( ಸೆಪ್ಟೆಂಬರ್‌ 24) ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಪ್ಲೇ ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT