ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌: ಮಾವೋವಾದಿ ಬಂಧನ

Published 3 ಏಪ್ರಿಲ್ 2024, 16:11 IST
Last Updated 3 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ಮೇದಿನಿನಗರ (ಜಾರ್ಖಂಡ್‌): ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಗ್ರಾಮಸ್ಥರನ್ನು ಪ್ರಚೋದಿಸಲು ಸಿದ್ಧತೆ ನಡೆಸುತ್ತಿದ್ದ ಆರೋಪದ ಮೇಲೆ ಮಾವೋವಾದಿಯೊಬ್ಬರನ್ನು ಇಲ್ಲಿನ ಪಲಾಮು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. 

‌‘ಮಾವೋವಾದಿಯನ್ನು ಪಂಕಜ್‌ ಪ್ರಜಾಪತಿ (32) ಎಂದು ಗುರುತಿಸಲಾಗಿದೆ. ಈತ ನಕ್ಸಲ್‌ ರಾಜೇಂದ್ರ ಸಿಂಗ್‌ ಸೂಚನೆಯಂತೆ ಚುನಾವಣೆ ಬಹಿಷ್ಕರಿಸಲು ಜನರ ಮನವೊಲಿಸಲು ಸಿದ್ಧತೆ ನಡೆಸುತ್ತಿದ್ದ.  ಗುಪ್ತಚರ ದಳದ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ರೀಷ್ಮಾ ರಮೇಶನ್‌ ತಿಳಿಸಿದ್ದಾರೆ.

ಈತನ ನಿವಾಸದ ಮೇಲೆ ದಾಳಿ ನಡೆಸಿದಾಗ ಆರೋಪಕ್ಕೆ ಸಂಬಂಧಿಸಿದ ಬ್ಯಾನರ್‌ಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT