ವಾರಾಣಸಿ(ಉತ್ತರ ಪ್ರದೇಶ): ಜಿ 20 ಸಭೆಯ ಮುಗಿಸಿದ ಬಳಿ ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಜುಗ್‌ನೌತ್ ಅವರು ಉತ್ತರ ಪ್ರದೇಶದ ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಜುಗ್‌ನೌತ್ ಪೂಜೆ ಸಲ್ಲಿಸಿದ್ದಾರೆ.
ದಶಾಶ್ವಮೇಧ ಘಾಟ್ ವಾರಾಣಸಿಯ ಪ್ರಮುಖ ಘಾಟ್‌ಗಳಲ್ಲಿ ಒಂದಾಗಿದೆ. ಇದು ಗಂಗಾನದಿಯ ದಡದಲ್ಲಿದೆ ಹಾಗೂ ವಿಶ್ವನಾಥ ದೇವಾಲಯಕ್ಕೆ ಹತ್ತಿರದಲ್ಲಿದೆ.
ಈ ಕುರಿತು ಎಎನ್‌ಐ ಸಂಸ್ಥೆ ವಿಡಿಯೊ ಹಂಚಿಕೊಂಡಿದೆ. ವಿಡಿಯೊದಲ್ಲಿ ಜುಗ್‌ನೌತ್ ಮತ್ತು ಅರ್ಚಕರ ಗುಂಪು ದೋಣಿಯಲ್ಲಿ ಕುಳಿತು ಘಾಟ್‌ನಲ್ಲಿ ಪೂಜೆ ಸಲ್ಲಿಸುವ ದೃಶ್ಯಗಳಿವೆ. ವಿಶೇಷವಾಗಿ ಈ ಘಾಟ್‌ನಲ್ಲಿ ಶಿವನಿಗೆ ಮತ್ತು ಗಂಗಾನದಿಗೆ ಪೂಜೆ ಮಾಡಲಾಗುತ್ತದೆ.