ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌‍ಪಿಗೆ ಮತ ನೀಡುವ ಮೂಲಕ ವಿರೋಧಿಗಳಿಗೆ ಸಂದೇಶ ರವಾನಿಸೋಣ: ಮಾಯಾವತಿ

Last Updated 1 ನವೆಂಬರ್ 2020, 8:29 IST
ಅಕ್ಷರ ಗಾತ್ರ

ಲಖನೌ: ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ನ.3 ರಂದು ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿಗಳ ಪರ ಮತದಾನ ಮಾಡುವ ಮೂಲಕ ವಿರೋಧಿಗಳಿಗೆ ಸಂದೇಶ ರವಾನಿಸೋಣ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಕ್ರಮವಾಗಿ 7 ಮತ್ತು 28 ಸ್ಥಾನಗಳಿಗೆ ನ.3 ರಂದು ಮತದಾನ ನಡೆಯಲಿದ್ದು, ಭಾನುವಾರ ಚುನಾವಣಾ ಪ್ರಚಾರಕ್ಕೆ ಅಂತಿಮ ದಿನ.

‘ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಉ‍ಪಚುನಾವಣೆಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳಿಗೆ ಮತ ನೀಡಿ. ಈ ಮೂಲಕ ನಾವು ವಿರೋಧಿಗಳಿಗೆ ಸರಿಯಾದ ರಾಜಕೀಯ ಸಂದೇಶ ರವಾನಿಸೋಣ’ ಎಂದು ಮಾಯಾವತಿ ಅವರು ಟ್ವೀಟ್‌ ಮಾಡಿದ್ದಾರೆ.

‘ಬಿಹಾರ ವಿಧಾನಸಭೆಯ 94 ಸ್ಥಾನಗಳಿಗಾಗಿ ಎರಡನೇ ಹಂತದ ಚುನಾವಣೆಯೂ ನ.3 ರಂದು ನಡೆಯಲಿದೆ. ಸದ್ಯ ಎಲ್ಲರ ಗಮನ ಚುನಾವಣೆ ಮೇಲಿದೆ. ಜೆಡಿ(ಯು) ಮತ್ತು ಆರ್‌ಜೆಡಿ ಪಕ್ಷಗಳು ಅಲ್ಲಿ ಹೇಗೆ ಆಡಳಿತ ನಡೆಸಿವೆ ಎಂಬುದನ್ನು ನೀವು ನೋಡಿದ್ದೀರಿ. ಈಗ ನಮ್ಮ ಹೊಸ ಮೈತ್ರಿಗೂ ಒಂದು ಅವಕಾಶ ನೀಡಿ’ ಎಂದು ಅವರು ಟ್ವಿಟರ್‌ ಮೂಲಕ ಮತದಾರರಲ್ಲಿ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಲೋಕ ಸಮಾಜ ಪಕ್ಷದೊಂದಿಗೆ ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT