ನವದೆಹಲಿ (ಪಿಟಿಐ): ‘ದೇಶದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ‘ಮೇರಿ ಮಾಠಿ ಮೇರಾ ದೇಶ್’ (ನನ್ನ ಮಣ್ಣು –ನನ್ನ ದೇಶ) ಅಭಿಯಾನವನ್ನು ಪ್ರಾರಂಭಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.
ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ವೀರ ಪುರುಷ ಹಾಗೂ ಮಹಿಳೆಯರನ್ನು ಗೌರವಿಸುವ ಹಿನ್ನೆಲೆಯಲ್ಲಿ ‘ಮೇರಿ ಮಾಠಿ ಮೇರಾ ದೇಶ್’ ಪ್ರಾರಂಭವಾಗುತ್ತಿದೆ.
ಮಾಸಿಕ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು, ‘ಹುತಾತ್ಮರ ಸ್ಮರಣಾರ್ಥವಾಗಿ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗುವುದು. ಅಭಿಯಾನದ ಅಡಿಯಲ್ಲಿ ಅಮೃತ ಕಳಸ ಯಾತ್ರೆಯನ್ನೂ ಆಯೋಜಿಸಲಾಗುವುದು. 7,500 ಕುಂಡಗಳಲ್ಲಿ ದೇಶದ ವಿವಿಧ ಭಾಗಗಳಿಂದ ಮಣ್ಣನ್ನು ಹಾಗೂ ಸಸಿಗಳನ್ನು ದೆಹಲಿಗೆ ತರಲಾಗುವುದು’ ಎಂದರು.
‘ವಿವಿಧ ಭಾಗಗಳಿಂದ ಬಂದ ಮಣ್ಣಿನಲ್ಲಿ ಸಸಿಗಳನ್ನು ನೆಟ್ಟು, ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ‘ಅಮೃತ ವಾಟಿಕಾ’ ನಿರ್ಮಿಸಲಾಗುವುದು. ಈ ವನ ‘ಏಕ ಭಾರತ ಶ್ರೇಷ್ಠ ಭಾರತ’ದ ಅತ್ಯುಚ್ಚ ಸಂಕೇತವಾಗಲಿದೆ’ ಎಂದು ಅವರು ತಿಳಿಸಿದರು.
ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಅಮೃತ ಮಹೋತ್ಸವದ ಅಂಗವಾಗಿ ಇದುವರೆಗೆ ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮೋದಿ ಹೇಳಿದ ಇತರ ಪ್ರಮುಖ ಅಂಶಗಳು
l ಈ ವರ್ಷವೂ ‘ಹರ್ ಘರ್ ತಿರಂಗಾ’ ಅಭಿಯಾನ ಆಚರಿಸಲು ಪ್ರಧಾನಿ ಕರೆ.
l ದೇಶದ ವಿವಿಧ ಪವಿತ್ರ ಸ್ಥಳಗಳಿಗೆ ಯಾತ್ರಿಕರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಉಲ್ಲೇಖ.
l ಪ್ರವಾಹ ಹಾಗೂ ನೈಸರ್ಗಿಕ ವಿಪತ್ತಿನಿಂದ ಜನರು ಅನುಭವಿಸಿದ ಸಮಸ್ಯೆಗಳ ಕುರಿತು ವಿಷಾದ ವ್ಯಕ್ತಪಡಿಸಿದರು.
l 250 ವರ್ಷಗಳಷ್ಟು ಹಳೆಯ ಮತ್ತು 2,500 ಅಪರೂಪದ ಹಾಗೂ ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಅಮೆರಿಕವು ಹಿಂದಿರುಗಿಸಿದರ ಬಗ್ಗೆ ಮಾಹಿತಿ.
l ನೀರಿನ ಸಂರಕ್ಷಣೆಗಾಗಿ ವಿವಿಧೆಡೆ ಜನರು ನೂತನ ಪ್ರಯತ್ನ ಮಾಡುತ್ತಿರುವ ಕುರಿತು ವಿವರಣೆ.
l ಫ್ರಾನ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು 100 ವರ್ಷಕ್ಕೂ ಹೆಚ್ಚು ವಯಸ್ಸಾದ ಯೋಗ ಶಿಕ್ಷಕಿ ಷಾಲೆಟ್ ಚಾಪಿನ್ ಅವರನ್ನು ಭೇಟಿಯಾದ ಕುರಿತು ಉಲ್ಲೇಖ.
l ಮಾದಕ ವಸ್ತು ಬಳಕೆ ವಿರೋಧಿ ಅಭಿಯಾನಗಳಲ್ಲಿ ಭಾಗಿಯಾದ ದೇಶದ 11 ಕೋಟಿಗೂ ಹೆಚ್ಚಿನ ಯುವ ಸಮೂಹಕ್ಕೆ, ₹ 12 ಸಾವಿರ ಕೋಟಿ ಮೌಲ್ಯದ 10 ಲಕ್ಷ ಕೆ.ಜಿ ಮಾದಕ ವಸ್ತು ನಾಶಪಡಿಸಿದ್ದಕ್ಕೆ ಶ್ಲಾಘನೆ.
ಮೆಹರಂ ಇಲ್ಲದೆ ಹಜ್ ಯಾತ್ರೆ
ಸುಮಾರು 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ವರ್ಷ ‘ಮೆಹರಂ (ಪುರುಷ ಸಂಗಾತಿ ಅಥವಾ ಪುರುಷ ಸಹಚರ)’ ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಬಹುದೊಡ್ಡ ಪರಿವರ್ತನೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಹಜ್ ನೀತಿಯಲ್ಲಿ ತಮ್ಮ ಸರ್ಕಾರವು ಮಾಡಿದ ಬದಲಾವಣೆಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಹೆಚ್ಚು ಹೆಚ್ಚು ಜನರು ವಾರ್ಷಿಕ ಹಜ್ ಯಾತ್ರೆಗೆ ಹೋಗಲು ಅವಕಾಶ ಪಡೆಯುತ್ತಿದ್ದಾರೆ ಎಂದು
ಅವರು ಹೇಳಿದರು.
‘ಈ ಬಾರಿ ಹಜ್ ಯಾತ್ರೆ ಕೈಗೊಂಡ ಮಹಿಳೆಯರ ಸಂಖ್ಯೆ 4 ಸಾವಿರಕ್ಕೂ ಹೆಚ್ಚು. ಯಾತ್ರೆಯಿಂದ ಮರಳಿದ ಮಹಿಳೆಯರಿಂದ ತಮಗೆ ಹೆಚ್ಚು ಪತ್ರಗಳು ಬಂದಿವೆ. ಈ ಹಿಂದೆ ಮುಸ್ಲಿಂ ಮಹಿಳೆಯರಿಗೆ ‘ಮೆಹರಂ’ ಇಲ್ಲದೆ ಹಜ್ ಯಾತ್ರೆ ಕೈಗೊಳ್ಳಲು ಅವಕಾಶವಿರಲಿಲ್ಲ. ಅವಕಾಶ ಕಲ್ಪಿಸಿದ ಸೌದಿ ಅರೆಬಿಯಾ ಸರ್ಕಾರಕ್ಕೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ’ ಎಂದೂ ಅವರು ಹೇಳಿದ್ದಾರೆ.
ಹಜ್ ಯಾತ್ರೆ ವೇಳೆ ಪುರುಷ ಸಂಗಾತಿ ಜತೆಗಿರಬೇಕೆಂಬ ನಿಯಮ ಕಡ್ಡಾಯವಾಗಿತ್ತು. 2018ರಲ್ಲಿ ಈ ನಿಯಮ ತೆಗೆದು ಹಾಕಿದ ನಂತರ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಪುರುಷ ಸಂಗಾತಿ ಇಲ್ಲದೇ ಈ ವರ್ಷ ಹಜ್ ಯಾತ್ರೆ ನಡೆಸಿದ್ದಾರೆ.
ಮೆಹರಂ ಇಲ್ಲದೆ ಹಜ್ ಯಾತ್ರೆ
ಸುಮಾರು 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ವರ್ಷ ‘ಮೆಹರಂ (ಪುರುಷ ಸಂಗಾತಿ ಅಥವಾ ಪುರುಷ ಸಹಚರ)’ ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಬಹುದೊಡ್ಡ ಪರಿವರ್ತನೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಹಜ್ ನೀತಿಯಲ್ಲಿ ತಮ್ಮ ಸರ್ಕಾರವು ಮಾಡಿದ ಬದಲಾವಣೆಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಹೆಚ್ಚು ಹೆಚ್ಚು ಜನರು ವಾರ್ಷಿಕ ಹಜ್ ಯಾತ್ರೆಗೆ
ಹೋಗಲು ಅವಕಾಶ ಪಡೆಯುತ್ತಿದ್ದಾರೆ ಎಂದು
ಅವರು ಹೇಳಿದರು.
‘ಈ ಬಾರಿ ಹಜ್ ಯಾತ್ರೆ ಕೈಗೊಂಡ ಮಹಿಳೆಯರ ಸಂಖ್ಯೆ 4 ಸಾವಿರಕ್ಕೂ ಹೆಚ್ಚು. ಯಾತ್ರೆಯಿಂದ ಮರಳಿದ ಮಹಿಳೆಯರಿಂದ ತಮಗೆ ಹೆಚ್ಚು ಪತ್ರಗಳು ಬಂದಿವೆ. ಈ ಹಿಂದೆ ಮುಸ್ಲಿಂ ಮಹಿಳೆಯರಿಗೆ ‘ಮೆಹರಂ’ ಇಲ್ಲದೆ ಹಜ್ ಯಾತ್ರೆ ಕೈಗೊಳ್ಳಲು ಅವಕಾಶವಿರಲಿಲ್ಲ. ಅವಕಾಶ ಕಲ್ಪಿಸಿದ ಸೌದಿ ಅರೆಬಿಯಾ ಸರ್ಕಾರಕ್ಕೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ’ ಎಂದೂ ಅವರು ಹೇಳಿದ್ದಾರೆ.
ಹಜ್ ಯಾತ್ರೆ ವೇಳೆ ಪುರುಷ ಸಂಗಾತಿ ಜತೆಗಿರಬೇಕೆಂಬ ನಿಯಮ ಕಡ್ಡಾಯವಾಗಿತ್ತು. 2018ರಲ್ಲಿ ಈ ನಿಯಮ ತೆಗೆದು ಹಾಕಿದ ನಂತರ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಪುರುಷ ಸಂಗಾತಿ ಇಲ್ಲದೇ ಈ ವರ್ಷ ಹಜ್ ಯಾತ್ರೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.