ಚೆನ್ನೈ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟವು 200ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದರು.

‘ಪೊಂಗಲ್’ ಆಚರಣೆಯಲ್ಲಿ ಮಾತನಾಡಿದ ಅವರು, ‘ಡಿಎಂಕೆ ಕಾರ್ಯಕರ್ತರ ರೀತಿ ಯಾರೂ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಸೇರಿದಂತೆ ಇತರ ಪಕ್ಷದವರು ಹೇಳುತ್ತಿದ್ದಾರೆ’ ಎಂದರು.

‘1967ರಲ್ಲಿ ಸಿ.ಎನ್. ಅಣ್ಣಾದೊರೈ ನೇತೃತ್ವದಲ್ಲಿ ಡಿಎಂಕೆಯು ಸರ್ಕಾರ ರಚಿಸಿದಾಗ, ಡಿಎಂಕೆ ಕಾರ್ಯಕರ್ತರ ಕೆಲಸದ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ಎಂ.ಭಕ್ತವತ್ಸಲಂ ಅವರು, ‘ಡಿಎಂಕೆ ಕಾರ್ಯಕರ್ತರಿಗೆ ಕೇವಲ ಒಂದು ಲೋಟ ಚಹಾ ನೀಡಲಾಗುತ್ತದೆ. ಆದರೆ ಅವರು ಕಠಿಣ ಪರಿಶ್ರಮಪಡುತ್ತಾರೆ. ಅವರ ಬದ್ಧತೆಗೆ ಯಾರೂ ಸಾಟಿಯಿಲ್ಲ’ ಎಂಬುದಾಗಿ ಶ್ಲಾಘಿಸಿದ್ದರು’ ಎಂದು ಸ್ಟಾಲಿನ್ ತಿಳಿಸಿದರು.

‘ಡಿಎಂಕೆ ಕಾರ್ಯಕರ್ತರಲ್ಲಿ ಇಂದಿಗೂ ಅದೇ ರೀತಿಯ ಬದ್ಧತೆಯಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಜಯಭೇರಿ ಬಾರಿಸೋಣ’ ಎಂದು ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.